ಟೊಳ್ಳು ರಾಷ್ಟ್ರೀಯತೆ ಬೇಡ

ಇವತ್ತಿನ್ ವಿ.ಕ.ದಲ್ಲಿ ಶ್ರೀ ಅನಂತ್ ಚಿನಿವಾರ ಅನ್ನೋರು ಒಂದು ಎರ್ರಾಬಿರ್ರಿ ದೊಡ್ಡ ಬರಹ ಬರ್ದಿದಾರೆ. ನಡುನಡುವೆ ತುಸು ಜಾಸ್ತಿ ಅನ್ಸೋಷ್ಟು ಇಂಗ್ಲೀಷ್ ಬಳಕೆ, ಮಹಾಪ್ರಾಣ ಇರಬೇಕಾಗಿರೋ ಕಡೆ ಅಲ್ಪಪ್ರಾಣಗಳನ್ನ ಹಾಕಿ ಅನುಷ್ಠುಪ್ ಛಂದಸ್ಸು ಎದ್ಬಂದು ತಲೆ ಚೆಚ್ಚಿಕೊಳ್ಳೋ ಹಾಗೆ ಬರ್ದಿರೋ ಸಂಸ್ಕೃತದ ಶ್ಲೋಕ - ಇವೆಲ್ಲ ದೋಷಗಳ ನಡುವೆ ರಾಷ್ಟ್ರೀಯತೆಯ ಬಗ್ಗೆ ಹುರುಳಿಲ್ಲದ ನಿಲುವುಗಳನ್ನ ಮುಂದಿಟ್ಟಿದಾರೆ. "ನನ್ನ ಕೈಯಲ್ಲಿ ಏನೂ ಸರಿಮಾಡಕ್ಕೆ ಆಗಲ್ಲ" ಅಂತ ಸೋಲೊಪ್ಪಿಕೊಂಡಂತಿರೋ ಚಿನಿವಾರ ಅವರ ಬರಹಕ್ಕೆ ನಮ್ಮ ಉತ್ತರ ಇಲ್ಲಿದೆ. ಈ ನಿಲುವುಗಳನ್ನ ಚಿನಿವಾರ ಅವರು ಇಲ್ಲಿ ನಾವು ಕೊಟ್ಟಿರೋಹಂಗೇ ಬರೆದಿಲ್ಲ, ಆದರೆ ಅವರ ಬರಹದ ಸಾರಾಂಶವನ್ನ ಇಲ್ಲಿ "ಅವರ ನಿಲುವು" ಅಂದಿದೆ. ನಮ್ಮ ಉತ್ತರವನ್ನ "ನಮ್ಮ ಉತ್ತರ" ಅಂದಿದೆ.

ಅವರ ನಿಲುವು: ಭಾರತ ಸಾಂಸ್ಕೃತಿಕವಾಗಿ ಮೊದಲಿಂದಲೂ ಒಂದಾಗಿತ್ತು.

ನಮ್ಮ ಉತ್ತರ: ಒಪ್ಕೊಳಣ. ಅದ್ಕ? ಏನೀಗ? ಮುಂದ?

ಅವರ ನಿಲುವು: ಭಾರತ ರಾಜಕೀಯವಾಗಿ ಒಂದಾಗಿದ್ದು ಬ್ರಿಟೀಷರು ಒಂದುಮಾಡಿದ ಮೇಲೇನೇ ಎನ್ನುವುದು ಸರಿಯಲ್ಲ. ಬೇರೆಬೇರೆ ಭಾರತೀಯ ರಾಜಮನೆತನದವರು ಒಂದುಮಾಡಿದ್ದುಂಟು.

ನಮ್ಮ ಉತ್ತರ: ಬರಹಗಾರನ ನಿಲುವು ಇದು ಅಂತ ಅನುಮಾನದಿಂದ ಹೇಳ್ಬೇಕು, ಅಷ್ಟೆ. ಯಾಕೇಂದ್ರೆ ಔರೇ ಒಂದು ಕಡೆ
ಭಾರತವನ್ನು ಭಾರತ ಅಂತನ್ನುವ ಒಂದು ದೇಶವನ್ನಾಗಿ ಒಟ್ಟುಮಾಡಿದ್ದು ಬ್ರಿಟಿಷರೇ. ಅದರ ಬಗ್ಗೆ ಅನುಮಾನವಿಲ್ಲ.

ಅಂತಾರೆ, ಇನ್ನೊಂದ್ಕಡೆ:
ಭಾರತಕ್ಕೊಂದು territorial identity ಯನ್ನು ತಂದುಕೊಟ್ಟವರ ಪೈಕಿ ಬ್ರಿಟಿಷರು ಕೊಟ್ಟಕೊನೆಯವರೇ ಹೊರತು, ಮೊದಲಿಗರಲ್ಲ!"

ಅಂತಾರೆ. ಯಾವುದು ನಂಬೋದು? ಇವರ ವಾದದ ಹರಿವನ್ನ ನೋಡಿದರೆ ಇವರ ನಿಲುವು ಎರಡನೇದು ಅಂತ್ಲೇ ನಂಬಬೇಕು ಅನ್ಸತ್ತೆ. ಅದನ್ನೇ ನಂಬೋಣ. ಆದರೆ ಆ ನಿಲುವು ಸರಿಯಲ್ಲ, ಮೊದಲನೇದೇ ಸರಿ! ಯಾಕೇಂದ್ರೆ ಇವತ್ತು ಯಾವುದನ್ನ ಭಾರತ ಅಂತ ಕರೀತೀವೋ ಅದನ್ನ ಹತ್-ಹತ್ರ ೧೦೦% ಒಗ್ಗೂಡಿಸಿದ್ದು ಬ್ರಿಟಿಷರೇ ಹೊರತು ಇತಿಹಾಸದಲ್ಲಿ ಬರೋ ಯಾವ ರಾಜಮನೆತನಾನೂ ಅಲ್ಲ. ಭಾರತದಲ್ಲಿ ಬಂದುಹೋದ ರಾಜರು ೧೦%ರಿಂದ ಹಿಡಿದು ೬೦-೭೦% ತನಕ ಹೋಗಿದ್ರು, ಆದರೆ ಬ್ರಿಟಿಷರಷ್ಟು ಒಂದುಮಾಡಿದ್ದರ ಬಗ್ಗೆ ಯಾವ ಪ್ರಮಾಣವೂ ಇಲ್ಲ.

ಅವರ ನಿಲುವು: ಈಗ ಭಾರತದ ಮೈಯಲ್ಲಿ ಬಿರುಕುಗಳು ಹುಟ್ಟಿವೆ

ನಮ್ಮ ಉತ್ತರ: ಬರಹಗಾರಂಗೆ "ಬಿರುಕು" ಅನ್ನೋದು ಸಕ್ಕತ್ ತಲೆ ತಿಂತಿದೆ ಅನ್ನೋದು ಸ್ಪಷ್ಟ. ಆದ್ರೆ ಆ ಬಿರುಕು ಅನ್ನೋದನ್ನ ಒಡೆದು ನೋಡಿದರೆ ಎರಡು ಪಾಲಾಗತ್ತೆ. ಮೊದಲ್ನೇ ಪಾಲು ವಿವಿಧತೆ, ಎರಡನೇ ಪಾಲು ಹಗೆತನ. ಬರಹಗಾರಂಗೆ ಇವೆರಡರ ನಡುವೆ ಗೊಂದಲ ಇರೋದು ಸ್ಪಷ್ಟವಾಗಿ ಕಾಣ್ಸತ್ತೆ. ಗೊಂದ್ಲಾನ ಸೊಲ್ಪ ಬಿಡ್ಸೋಣ.

ಮೊದಲ್ನೇದು (ಅಂದ್ರೆ ವಿವಿಧತೆ) ಅನ್ನೋದು ಭಗ್ವಂತನ್ ವಿಭೂತಿಗಳಿದ್ದಂಗೆ. ತೈತ್ತಿರೀಯೋಪನಿಷತ್ತಲ್ಲಿ
ಸೋsಕಾಮಯತ | ಬಹು ಸ್ಯಾಂ ಪ್ರಜಾಯೇಯೇತಿ | ಸ ತಪೋsತಪ್ಯತ | ಸ ತಪಸ್ತಪ್ತ್ವಾ| ಇದಂ ಸರ್ವಮಸೃಜತ | ಯದಿದಂ ಕಿಂ ಚ | ತತ್ ಸೃಷ್ಟ್ವಾ | ತದೇವಾನುಪ್ರಾವಿಶತ್ |

ಅಂತಿದೆ. ತಿಳಿಗನ್ನಡದಲ್ಲಿ
ಅವನು ಕಾಮಿಸಿದ | ಬಹುವಾಗ್ಬೇಕು, ಪ್ರಜೆಗಳನ್ನ ಹುಟ್ಟಿಸಬೇಕು ಅಂತ | ಕಾಮಿಸಿ ತಪಸ್ಸಿಗೆ ಕೂತ | ಎದ್ದು ಇದ್ನೆಲ್ಲ ಹುಟ್ಟಿಸಿದ | ಏನೇನಿದ್ಯೋ ಅದ್ನೆಲ್ಲ | ಹುಟ್ಸಿ ಅದ್ನೇ ಹೊಕ್ಕ |

ಅಂತ ಅರ್ಥ. ಇಲ್ಲಿ ಈ ವಿವಿಧತೆಗಳಿರೋ ಪ್ರಪಂಚ ಅನ್ನೋದು ಆ ಬೊಮ್ಮನ ಕೆಲಸವೇ, ಬೊಮ್ಮನೇ. ಭಾರತೀದೇವಿ ಅನ್ನೋಳೊಬ್ಬಳನ್ನ ಉಪಾಸನೆಮಾಡಿಕೊಂಡರೆ ಅವಳೇ ಬಹುವಾಗಿ ಕನ್ನಡಿಗರು, ತಮಿಳರು, ತೆಲುಗರು, ಹಿಂದಿಯೋರು ಮುಂತಾದವರಾಗಿರೋದು. ಇವರನ್ನೆಲ್ಲ ಹುಟ್ಟಿಸಿ ಅವಳೇ ಇವುಗಳನ್ನೆಲ್ಲ ಹೊಕ್ಕಿರೋದು ಗುರು! ವಿವಿಧತೆಯನ್ನ (ಬಹುತ್ವವನ್ನ) ಎದುರಿಸಬೇಕಾಗಿರೋ ಒಂದು "ಬಿರುಕು" ಅನ್ಕೊಳೋದು ಸಿಕ್ಕಾಬಟ್ಟೆ ಪೆದ್ದತನ ಗುರು! ಈ ವಿವಿಧತೆಯಲ್ಲಿ ಕನ್ನಡವೇ ಬೇರೆ, ತಮಿಳೇ ಬೇರೆ, ಸಂಸ್ಕೃತವೇ ಬೇರೆ. ಈ ವಿವಿಧತೆಯನ್ನ ಇದೆ ಅಂತ್ಲೂ ಒಪ್ಪಿಕೊಳ್ಳದೇ ಇರೋದು ಪ್ರತ್ಯಕ್ಷವನ್ನೇ ಅಲ್ಲಗಳೆಯೋ ಪೆದ್ದತನವೇ ಹೊರತು ಮತ್ತೇನೂ ಅಲ್ಲ. ಇದು ಪ್ರತ್ಯಕ್ಷ-ಅನುಮಾನ-ಆಗಮಗಳೆಂಬ ಪ್ರಮಾಣಗಳನ್ನು ಒಪ್ಪುವ ಸನಾತನಧರ್ಮಕ್ಕೆ ವಿರುದ್ಧವೂ ಹೌದು.

ಇನ್ನು ಎರಡನೇದು (ಅಂದ್ರೆ ಹಗೆತನ). ಈ ಹಗೆತನವನ್ನ ಎದುರಿಸಬೇಕು ಅನ್ನೋದು ಒಪ್ಪಬೇಕಾದ ಮಾತೇ. ಹೇಗೆ ಎದುರಿಸೋದು? ಕಾದಾಡ್ತಿರೋರಿಗೆ "ನೀವೆಲ್ಲಾ ಒಂದೇ, ನಿಮ್ಮ ಇತಿಹಾಸವೆಲ್ಲಾ ಒಂದೇ, ನಿಮ್ಮ ಸಂಸ್ಕೃತಿಯೆಲ್ಲಾ ಒಂದೇ" ಅಂತ ಹೇಳ್ದ್ರೆ ಸಾಕಾ? "ಲೋ ಹೋಗೋಲೋ! ಬೆಂಕಿಹಾಕ ನಿನ್ನ ಒಗ್ಗಟ್ಟಿಗೆ!" ಅಂತ ಜನ ಅನ್ನೋದು ಇದ್ರಿಂದ್ಲೇ. ಈ ಕುರ್ಚಿ-ಸಿದ್ಧಾಂತ ಬಿಟ್ಟು ನಿಜವಾಗಲೂ ಈ ಹಗೆತನಾನ ನಿಲ್ಲಿಸಕ್ಕೆ ಇವತ್ತಿನ ಭಾರತದಲ್ಲಿರೋ ಆಡಳಿತ ವ್ಯವಸ್ಥೇನ ರಿಪೇರಿ ಮಾಡ್ಬೇಕು. ನದಿನೀರು-ಹಂಚಿಕೆಗೆ ಕಾನೂನು ಮಾಡದೆ ಕೇಂದ್ರದಲ್ಲಿ ಲಾಬಿ ಮಾಡಿದೋರಿಗೆ ನೀರು ಅನ್ನೋದು ಸರಿಯಾದ ವ್ಯವಸ್ಥೇನಾ ಗುರು? ಈ ವ್ಯವಸ್ಥೆಯನ್ನ ಸರಿಮಾಡೋದು ಬಿಟ್ಟು ಅಡುಗೋಲಜ್ಜಿ ಕತೆ ಹೆಳ್ದ್ರೆ ಬಾಯಾರಿಕೆಯಿಂದ ಸಾಯ್ತಿರೋರು ಸುಮ್ನಿರ್ತಾರಾ ಗುರು? ಒಟ್ನಲ್ಲಿ ಹಗೆತನಕ್ಕೆ ಪರಿಹಾರ ಇದೆ. ಅದು ಬೇಡದೇ ಇದ್ದಾಗ ಸಂಸ್ಕೃತದ ಶ್ಲೋಕ (ಅದೂ ತಪ್ಪುತಪ್ಪು) ಹೇಳೋದಲ್ಲ, ವ್ಯವಸ್ಥೆಗೆ ಆಗಬೇಕಾಗಿರೋ ರಿಪೇರಿ ಮಾಡೊದು.

ಅವರ ನಿಲುವು: ಜಾಗತಿಕ ಮಟ್ಟದಲ್ಲಿ ಇಂಗ್ಲಿಷಿಲ್ಲದೆ ನಾವು ಬೆಳೆಯಲು ಆಗುವುದಿಲ್ಲ

ನಮ್ಮ ಉತ್ತರ: ಸಕ್ಕತ್ತಾಗಿ ಸೋಲೊಪ್ಕೊಂಡಿದಾರೆ ಸಾಹೇಬ್ರು! ನಿಮಗೆ ಆಗದೇ ಇರಬೋದು ಸ್ವಾಮಿ, ನೀವು ಸೋಲೊಪ್ಕೊಂಡಿರಬೋದು. ಆದ್ರೆ ಇನ್ನೂ ಈಗ ತಲೆ ಎತ್ತುತ್ತಾ ಇರೋ ಕನ್ನಡ ನಾಡಿದೆ, ಮೈಯಲ್ಲಿ ಮಿಂಚಿರೋ ಕನ್ನಡಿಗರು ಇದಾರೆ! ಇವರ ಹುಮ್ಮಸ್ಸಿಗ್ಯಾಕೆ ನೀರು ಹಾಕಕ್ಕೆ ಹೊರಟಿದ್ದೀರಿ? ನಿಮಗೆ ಆಗದೇ ಹೋದ್ರೆ ತೆಪ್ಪಗೆ ಮನೇಲಿ ಮಲ್ಕೊಳಿ! ಜಪಾನ್, ಇಸ್ರೇಲ್, ಜರ್ಮನಿ - ಇವೆಲ್ಲಾ ಹೇಗೆ ಇಂಗ್ಲೀಷ್ ಇಲ್ದೆ ನಮಗಿಂತ ಮುಂದಿವೆ? ಅವುಗಳಲ್ಲಿ ಯಾವ ವ್ಯವಸ್ಥೆ ಇದೆ ಅಂತ ಅಧ್ಯಯನ ಮಾಡಿ! ತಿರ್ಗಾ ಅವರ ಇತಿಹಾಸ ಗಿತಿಹಾಸ, ಸಂಸ್ಕೃತಿ - ಇವೆಲ್ಲಾ ಮರೀರಿ. ವ್ಯವಸ್ಥೆ, ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿ, ಇಲ್ಲಾ ಮಾಡಕ್ಕಾಗೋರಿಗಾದರೂ ಬಿಡಿ!

ಅವರ ನಿಲುವು: ಇಂಗ್ಲೀಷನ್ನು ವಿರೋಧಿಸಬೇಕು, ಆದರೆ ಆಗಲ್ಲ

ನಮ್ಮ ಉತ್ತರ: ಇದೂ ಒಬ್ಬ ಸೋಲೊಪ್ಪಿಕೊಂಡಿರೋನ್ ಮಾತು! ಇವರಿಗೆ ಇಂಗ್ಲೀಷು ತಿನ್ನಕ್ಕೂ ಆಗದೇ ಇರೋ, ಬಿಡಕ್ಕೂ ಆಗದೇ ಇರೋ ಲಾಡು! ವಿರೋಧಿಸಬೇಕು, ಆದರೆ ಆಗಲ್ಲ (ಸಾಹೇಬ್ರು ಉಪಯೋಗಿಸಿರೋ ಇಂಗ್ಲೀಷ್ ಪದಗಳ ಸಂಖ್ಯೆ ನೋಡಿದ್ರೆ ಗೊತ್ತಾಗತ್ತೆ)! ಯಾಕೆ ವಿರೋಧಿಸಬೇಕು? ಯಾಂಕೇಂದ್ರೆ ಅದು ಬೇರೆ ದೇಶದ ಭಾಷೆಯಲ್ಲವೇ, ಅದಕ್ಕೆ! - ಇದು ಇವರ ಸಿದ್ಧಾಂತ. ಇದರಲ್ಲಿ ಹುರುಳೇ ಇಲ್ಲ. ಇಂಗ್ಲೀಷನ್ನ ಯಾಕೆ ವಿರೋಧಿಸಬೇಕು? ವಿರೋಧಿಸೋ ಅವಶ್ಯಕತೆಯೇ ಇಲ್ಲ. ಅದರಿಂದ ಬರೋದನ್ನೆಲ್ಲ ತೊಗೋಬೇಕು, ಅದಕ್ಕೆ ಕೊಡೋದ್ನೆಲ್ಲ ಕೊಡಬೇಕು. ಬೇಕಾಗಿರೋ ತನಕ ಇಂಗ್ಲೀಷ್ ಉಪಯೋಗಿಸಿಕೊಳ್ಳೋದು, ಆಮೇಲೆ ಬಿಟ್ಟಾಕಿ ಮುಂದೆ ಹೋಗೋದು, ಅಷ್ಟೆ. ವಿರೋಧಿಸೋದೇನು ಬಂತು ಮಣ್ಣು? ಇವರಿಗೆ ಇಲ್ಲಾ ಒಂದನ್ನ ವಿರೋಧಿಸಬೇಕು, ಇಲ್ಲಾ ಹಾಡಿ ಹೊಗಳಬೇಕು ಅನ್ನೋದೆರಡೇ ಗೊತ್ತಿರೋಹಾಗಿದೆ. ಉಪಯೋಗಿಸಿ ಬಿಸಾಕೋದು ಅನ್ನೋ ಮೂರನೇದೂ ಇದೆ ಗುರು!

ಅವರ ನಿಲುವು: ಜಾಗತೀಕರಣವನ್ನು ವಿರೋಧಿಸಬೇಕು, ಆದರೆ ಆಗಲ್ಲ

ನಮ್ಮ ಉತ್ತರ: ಇದೂ ಇವರಿಗೆ ಇಂಗ್ಲೀಷ್ ಇದ್ದಂಗೇನೇ. ಇವರ ಪ್ರಕಾರ ಯಾಕೆ ವಿರೋಧಿಸಬೇಕು ಅಂದ್ರೆ ಇದರಿಂದ "ದೇಶ" ಅನ್ನೋದರ ಗಡಿ ಎಲ್ಲಿದೇಂತಾನೇ ಗೊತ್ತಾಗಲ್ವಲ್ಲ, ಅದು! ಆದರೆ ನಿಜವಾಗಲೂ ನೋಡಿದ್ರೆ ಜಾಗತೀಕರಣ ಅನ್ನೋದನ್ನ ವಿರೋಧಿಸೋ ಅವಶ್ಯಕತೇನೇ ಇಲ್ಲ. ಪುರಂದರದಾಸರು ಹೇಳೋ ಹಾಗೆ ಜಗತ್ತಿನಲ್ಲಿ
ಈಸಬೇಕು, ಇದ್ದು ಜಯಿಸಬೇಕು

ಅದುಬಿಟ್ಟು ಈಜಕ್ಕೇ ಹೆದ್ರುಕೋಬಾರ್ದು! ಜಗತ್ತಿನಲ್ಲಿ ಯಾವ ನನ್ನ ಮಗನ್ಗೂ ತಲೆ ಬಗ್ಗಿಸೋ ಅವಶ್ಯಕತೇನೇ ಬರದೇ ಇರೋ ಹಾಗೆ ನಮ್ಮನ್ನ ನಾವು ಗಟ್ಟಿ ಮಾಡ್ಕೋಬೇಕು. ಅದು ಬಿಟ್ಟು ಅದನ್ನ ವಿರೋಧಿಸಬೇಕು ಅನ್ನೋ ಇವರು ಸೋಲೊಪ್ಪಿಕೊಂಡು ತಮ್ಮ ಸೋಲ್ನ ಇನ್ನೊಬ್ಬ್ರಿಗೆ ಹರಡೋ ಕೆಲಸ ಮಾಡ್ತಿರೋದು ಸರಿಯಲ್ಲವೇ ಅಲ್ಲ. ಒಟ್ನಲ್ಲಿ ತಿರ್ಗಾ ಅದೇ ಗೋಳು: ಇಲ್ಲಾ ವಿರೋಧಿಸಬೇಕು, ಇಲ್ಲಾ ಹಾಡಿ ಹೊಗಳಬೇಕು ಅನ್ನೋದೆರಡೇ ಇವರಿಗೆ ಕಾಣಿಸ್ತಾ ಇರೋದು. ಸರಿಯಲ್ಲ. ಎಲ್ಲೀವರೆಗೆ, ಎಲ್ಲೆಲ್ಲಿ ನಮಗೆ ಜಾಗತೀಕರಣದಿಂದ ಉಪಯೋಗ ಆಗತ್ತೋ ಅಲ್ಲೀವರೆಗೆ ಬಳಸಿಕೊಳ್ಳೋದು, ಎಲ್ಲೆಲ್ಲಿ ನಮಗೇ ಕಷ್ಟಾನೋ ಅಲ್ಲೆಲ್ಲ ಕೈಬಿಡೋದು. ಇಷ್ಟು ಮಾಡಿದರೆ ಸಾಕು. ಈ ಮೂರನೇದನ್ನ ಸಾಹೇಬ್ರು ಸೊಲ್ಪ ಅರ್ಥ ಮಾಡ್ಕೋಬೇಕು.

ಅವರ ನಿಲುವು: ಮೇಲಿನೆರಡು ಆಗಬೇಕಾದರೆ ಭಾರತದ ರಾಜ್ಯಗಳೆಲ್ಲ ಬೇರೆ ಬೇರೆ ದೇಶಗಳಾಗಬೇಕು

ನಮ್ಮ ಉತ್ತರ: ಇದು ಒಂದು ರೀತಿ ಮನೆಹಾಳು ಬುದ್ಧೀನೇ. ವ್ಯವಸ್ಥೆ ಸರಿಮಾಡೋ ಯೋಗ್ಯತೆಯಿಲ್ಲ, ಸರಿಮಾಡಕ್ಕೆ ಆಗತ್ತೆ ಅನ್ನೋ ಭರವಸೆ ಇಲ್ಲಾ ಅಂತ ಸರಿ ಮಾಡಕ್ಕೆ ಹೊರಟಿರೋರಿಗೆ ದೇಶ ಒಡೆದರೇನೇ ನಿಮ್ಮ ಗುರಿ ಮುಟ್ಟಕ್ಕಾಗೋದು ಅನ್ನೋ ಮನೆಹಾಳು ಬುದ್ಧೀನ ಹೇಳ್ಕ್ಲೊಡ್ತಾ ಇರೋ ಇವರು ನಿಜವಾದ ಬಿರುಕು ತರ್ತಾ ಇರೋದು ಭಾರತದಲ್ಲಿ! ನಂಬಬೇಡ ಗುರು ಇವರನ್ನ! ಈ ಸೋತ ಜನರನ್ನ ಮರೆತು ನಿಜವಾದ ವ್ಯವಸ್ಥೆಯನ್ನ ಕಟ್ಟಬೇಕು, ಇದರಿಂದಲೇ ದೇಶ ಬಲಿಷ್ಠವಾಗೋದು. ಬೇರೆಬೇರೆ ದೇಶಗಳಾಗಬೇಕು ಅಂದುಕೊಳ್ಳೋದು ಒಬ್ಬ ಹತಾಶನಾಗಿರೋ, ಸೋತುಹೋಗಿರೋನು ಮಾತ್ರ!

ಅವರ ನಿಲುವು: ನನ್ನ ಕೈಯಲ್ಲಿ ಆಗದೇ ಇರೋ ಇಂಗ್ಲೀಷ್ ವಿರೋಧ ಮತ್ತು ಜಾಗತೀಕರಣ ವಿರೋಧ ಇವರಡಕ್ಕಿಂತ ಈಗಾಗಲೇ ಒಪ್ಪಿಕೊಂಡಿರುವ ಹಾಗೆ ಒಂದು ದೇಶವಾಗೇ ಉಳಿಯುವುದು ಮುಖ್ಯ

ನಮ್ಮ ಉತ್ತರ: ಇವರ ಮುಂದೆ ಎರಡು ಸೋಲುಗಳು ನಿಂತಿವೆ:
  • ಇಂಗ್ಲೀಷ್ ಮತ್ತು ಜಾಗತೀಕರಣಗಳ್ನ ಎದುರಿಸಕ್ಕೆ ಆಗದೇ ಇರೋದು
  • ಭಾರತ ಅಂತ ಒಂದು ದೇಶ ಈಗಾಗಲೇ ಇರೋದರಿಂದ ಇಂಗ್ಲೀಷ್ ಮತ್ತು ಜಾಗತೀಕರಣಗಳನ್ನ ಎದುರಿಸಕ್ಕೆ ಬೇಕಾಗಿರೋ ಬೇರೆಬೇರೆ ದೇಶಗಳು ಇಲ್ಲದೇ ಇರೋದು
ಇಂಗ್ಲೀಷ್ ಮತ್ತೆ ಜಾಗತೀಕರಣಗಳ್ನ ಎದುರಿಸಬೇಕು ಅನ್ಕೊಳೋದೇ ತಪ್ಪು ಅಂತ್ಲೂ ಹೇಳಿದ್ದಾಯ್ತು, ಬೇರೆಬೇರೆ ದೇಶಗಳಾಗಬೇಕು ಅನ್ನೋದು ಮನೆಹಾಳು ಮಾತು, ಸೋತೋನ ಮಾತು ಅಂತ್ಲೂ ಹೇಳಿದ್ದಾಯ್ತು. ಆದ್ರೆ ಇಲ್ಲಿ ಗಮನಿಸಬೇಕಾಗಿರೋ ವಿಷಯ ಏನೆಂದರೆ ಇವರು "ಆರು ಹಿತವರು ನಿನಗೆ ಇವೆರಡು ಸೋಲುಗಳೊಳಗೆ?" ಅನ್ನೋ ಪ್ರಶ್ನೇನ ಉತ್ತರಿಸೋ ಗುಂಗಲ್ಲಿದಾರೇ ಹೊರತು ಇವರ ಸಿದ್ಧಾಂತದಲ್ಲಿ ಯಾವ ಹೊಸಬೆಳಕೂ, ಹೊಂಬೆಳಕೂ, ಉಜ್ಜ್ವಲ ಭವಿಷ್ಯವೂ ಕಾಣ್ತಾ ಇಲ್ಲ. ಇಂಗ್ಲೀಷು, ಜಾಗತೀಕರಣ - ಇವುಗಳನ್ನ ಎಲ್ಲಿಡಬೇಕೋ ಅಲ್ಲಿಡಕ್ಕೆ ಇವರ ಕೈಯಲ್ಲಿ ಆಗ್ತಾನೇ ಇಲ್ಲ, ಇಡಕ್ಕೆ ಯಾವ ವ್ಯವಸ್ಥೆ-ರಿಪೇರಿ ಆಗ್ಬೇಕು ಅಂತ್ಲೂ ಇವರಿಗೆ ಅರ್ಥ ಆಗ್ತಾ ಇಲ್ಲ. ಭಾರತದ ಏಕತೆಗೆ ಧಕ್ಕೆ ಬರದೇ ಇರುವ ಹಾಗೆ, ಇಂಗ್ಲೀಷ್ ಮತ್ತು ಜಾಗತೀಕರಣಗಳನ್ನು ನಮಗೆ ಬೇಕಾದಂಗೆ ಉಪಯೋಗಿಸಿಕೊಳ್ಳೋ ಹಾಗೆ ಮಾಡಕ್ಕೆ ಸಾಧ್ಯ. ಸೊಲ್ಪ ತಲೆ ಉಪಯೋಗಿಸಬೇಕು, ಸೊಲ್ಪ ದುಡೀಬೇಕು, ಅಷ್ಟೆ.

ಅವರ ನಿಲುವು: ಜನ ತಮ್ಮ ಭಿನ್ನತೆಯನ್ನು ತೋರಿಸಿಕೊಳ್ಳಲು ಇಂಗ್ಲೀಷ್, ಜಾಗತೀಕರಣ ಮತ್ತು ಧರ್ಮಗಳೆಂಬ ಮೂರನ್ನು ವಿರೋಧಿಸುತ್ತಿದ್ದಾರೆ, ಇದರಿಂದ ದೇಶ ಒಡೆದುಹೋಗುವ ಭಯವಿದೆ

ನಮ್ಮ ಉತ್ತರ:
ಮೊದಲೆರಡನ್ನು ವಿರೋಧಿಸೋದು ಪೆದ್ದತನ, ಸೋಲೊಪ್ಪಿಕೊಳ್ಳೋದು ಅಂತ ಆಗಲೇ ಹೇಳಿದ್ದಾಯ್ತು. ಇನ್ನು ಧರ್ಮವನ್ನ ವಿರೋಧಿಸಬಾರ್ದು ಅನ್ನೋದೂ ನಿಜವೇ. ಆದರೆ ಆ ಧರ್ಮ ಅನ್ನೋದನ್ನ ಜನಕ್ಕೆ ಹರಡೋದಾದರೂ ಹೇಗೆ? ಹರಡಕ್ಕೆ ಅದ್ನ ಔರ್ ಭಾಷೇಲಿ ಹೇಳಬೇಕು ಅನ್ನೋದನ್ನ ಹೊಸದಾಗಿ ಹೇಳ್ಬೇಕಾ ಗುರು? ತಮಿಳ್ರುಗೂ ಕನ್ನಡಿಗರಿಗೂ ಧರ್ಮ ಹೇಳ್ಕೊಡಕ್ಕೆ ಹೊರಡೋರು ಇಬ್ರುಗೂ ಸಂಸ್ಕೃತಾನೇ ಮದ್ದು ಅನ್ಕೊಳೋದು ಪೆದ್ದತನ ಗುರು! ತಮಿಳರಿಗೆ ತಮಿಳಲ್ಲೇ ಹೇಳ್ಬೇಕು, ಕನ್ನಡಿಗರಿಗೆ ಕನ್ನಡದಲ್ಲೇ ಹೇಳಬೇಕು. ನಿಜವಾದ ಧರ್ಮ ಪ್ರಚಾರಕನಿಗೆ ಇದು ಅರ್ಥ ಆಗತ್ತೆ. ಅದು ಬಿಟ್ಟು ತಿರ್ಗಾ ಅದೇ "ಧರ್ಮ=ಸಂಸ್ಕೃತ" ಅನ್ನೋ ನಿಲ್ದೇ ಇರೋ ಸಮೀಕರಣ ಹಾಕ್ಕೊಂಡು ಕೂತಿದ್ರೆ ಚೊಂಬುಲಿಂಗ! ಒಗ್ಗಟ್ಟು ನಿಜವಾಗಲೂ ಉಳಿಯಕ್ಕೆ ವಿವಿಧತೇನ ಕಾಪಾಡ್ಕೊಳೋ ಅಗತ್ಯದ ಅರಿವಾಗೋದು ಸಕ್ಕತ್ ಮುಖ್ಯ ಗುರು!

ಅವರ ನಿಲುವು: ಭಾರತದೇಶ ಒಡೀಬಾರ್ದು

ನಮ್ಮ ಉತ್ತರ: ಖಂಡಿತ ಒಡೀಬಾರ್ದು. ಒಡೀದೇ ಇರಕ್ಕೆ ತುಕ್ಕು ಹಿಡಿದಿರೋ ವ್ಯವಸ್ಥೆ ರಿಪೇರಿ ಆಗ್ಬೇಕು, ವಿವಿಧತೆಯನ್ನ ಕಾಪಾಡಬೇಕು.

ಒಟ್ನಲ್ಲಿ ಚಿನಿವಾರ ಅವರ ಬರಹದಲ್ಲಿ ಕಾಣ್ಸೋದು ಬರೀ ಸೋಲೊಪ್ಪಿಕೊಂಡಿರೋರ ಅಳು. ಮಾತಾಡೋದು ಮಾತ್ರ ರಾಷ್ಟ್ರೀಯತೆ! ಈ ಟೊಳ್ಳು ರಾಷ್ಟ್ರೀಯತೆಯಿಂದ ಏನೂ ಉಪಯೋಗವಿಲ್ಲ, ನಿಜವಾದ ರಾಷ್ಟ್ರೀಯತೆ ಅಂದ್ರೆ ಇರೋ ವಿವಿಧತೆಯನ್ನ ಮುಚ್ಚಿಹಾಕೋದಲ್ಲ, ಅಥವಾ ಇಲ್ಲದಿರೋ ಏಕತೆಯನ್ನ ಹುಟ್ಟಿಹಾಕೋದಲ್ಲ - ವಿವಿಧತೆಯಲ್ಲಿ ಏಕತೆ.

ಇದೂ ಎರ್ರಾಬಿರ್ರಿ ದೊಡ್ಡ ಬರಹಾನೇ ಆಯ್ತು. ಸರಿ. ಕಾಫೀಗ್ ಓಗ್ಮ?

60 ಅನಿಸಿಕೆಗಳು:

Anonymous ಅಂತಾರೆ...

ಗುರು! ಕೊರತೆಗಳನ್ನ acknowledge ಮಾಡೋದನ್ನ ಸುಮ್ನೆ ಸೋಲು ಒಪ್ಕೊಂಡಿರೋದು ಅನ್ನೋ ಪಟ್ಟಿ ಕಟ್ಟಿ ಮೂಲೆಗೆ ತಳ್ಬಿಟ್ಟು ತಾವು ಸಕ್ಕತ್ ಪಂಟ್ರು, ಸಕ್ಕತ್ ಪಾಸಿಟೀವ್ ಅನ್ನೊ ಪಟ್ಟಿ ಅಂಟ್ಸ್ಕೊಬೇಡಿ! ಇನ್ನೊಬ್ರುನ್ನ ಲೇವ್ಡಿ ಮಾಡು, ಅನಸಿಕೆಗಳ್ನ, ಪ್ರಾಜೆಕ್ಟ್ಸ್ ಗಳ್ನ critic ತರ ಟೀಕ್ಸು, ಯರ್ರಾ-ಬಿರ್ರಿ ಬಾಯಿಗೆ ಬಂದಂಗೆ ಬಯ್ಯಿ ಅಂದ್ರೆ ಅದೇನೂ ಕಷ್ಟ ಇಲ್ಲಾ ಗುರು, ಬೇಕಾದ್ರೆ ನಾನೂ ನಿನ್ನನ್ನ ಟೀಕಿಸ ಬಹುದು, ಉಡಾಫೆಯಾಗಿ ವ್ಯಂಗ ಮಾಡ್ಬಹುದು. ನಮ್ಮ ರಾಜಕಾರಣಿಗಳ್ ತರ ಸುಮ್ನೆ ಚಿಂದಿಯಾಗಿ ಮಾತಾಡೋದು ಪ್ರಯೊಜ್ನ ಇಲ್ಲ, ಮಾಡ್ ತೋರ್ಸಿ ಅಂದ್ರೆ ಬಾಲ ಮುದುರ್ಕೊಂಡು ಇರೋದು!! ಕೆಲುವೊಮ್ಮೆ ದ್ವಂದ್ವಗಳು ಇರುತ್ವೆ ಅವುಗಳನ್ನ ಹೇಳೊದು ಜಾಸ್ತಿನೇ ಕಷ್ಟ ಗುರು. ಬರೀ ಅನುಕೊಲವಾದ ವಿಷಯಗಳ್ನ ಹೆಳ್ದ್ರೆ ಸಾಲ್ದು. ನಿಮ್ಮ ಈ ಕಟ್-ಪೀಸ್ ಅನಾಲಿಸಿಸ್ ಮತ್ತೊಮ್ಮೆ ಬರೀ ನೆಗಟಿವಿಟಿಯ ಬಣ್ಣ ಹಚ್ಚ್ಕೊಂಡ್ ಮೇರೀತಾ ಇದೆ ಗುರು!!

ಕನ್ನಡದ ಬಗ್ಗೆ ನಡೀತಾ ಇರೊ ಒಳ್ಳೆ ವಿಷಯಗಳ ಬಗ್ಗೆ, ಕನ್ನಡಿಗರು ಮಾಡ್ತಿರೋ positive contributions ಬಗ್ಗೆ ಸ್ವಲ್ಪ positive ಆಗಿ ಬರಿ ಗುರು, ಅವುಗಳ್ಗೇನೂ ಬರ ಇಲ್ಲ ಅಲ್ಲ್ವಾ? ಬರೀ ಅವ್ರು-ಇವ್ರುನ್ನ ಟೀಕ್ಸ್ಕೊಂಡು, ಸಿಕ್ಕವ್ರ್ನೆಲ್ಲಾ ಲೇವ್ಡಿ ಮಾಡ್ಕೊಂಡು, ಯರ್ರಾ-ಬಿರ್ರಿ ಅಣಗುಸ್ಕೊಂಡು, ತಾರಾ-ಮಾರ ತರಾಟೆ ತೊಗೊಂಡ್ರೆ, ಅಸಹ್ಯ ಉಂಟ್ ಮಾಡೋ ಹಾಗೆ ಬರ್ದ್ರೆ ಕನ್ನಡಕ್ಕೆ, ಕನ್ನಡಿಗರಿಗೆ ಕೆಟ್ಟ ಪ್ರೇರಣೆಯಾಗೋ ಮಾಧ್ಯಮ ಆಗ್ತೀರ ಅಷ್ಟೆ!! ಬರೀ entertainment value ಆಗಿ ಕೂತ್ಕೊಳುತ್ತೆ ಅಷ್ಟೆ. ಇದ್ರಿಂದ ಕನ್ನಡದ ಮೇಲೆ ಪ್ರೀತಿ ಬರಲ್ಲ, ಬೇರೋಂದರ ಮೇಲೆ ಅಸಹ್ಯ ಬರುತ್ತೆ ಅಷ್ಟೆ. ಅದ್ರ್ ಬದ್ಲು ಕನ್ನಡಕ್ಕೆ positiveಆಗಿ contribute ಮಾಡೋದು ಹೇಗೆ ಅಂತ ಯೊಚ್ಸಿ ಬರೀರಿ, poisitive things ಬರೀರಿ.

ಕನ್ನಡಕ್ಕಿಂತಾ ಬೇರೆ ಭಾಷೇ ಇಲ್ಲ, ಕನ್ನಡದಲ್ಲಿರೊ ಆಸ್ತಿ ಬೇರೆಲ್ಲೂ ಇಲ್ಲ, ಅದನ್ನ ಎತ್ ಹಿಡಿಯೋಣ ಗುರು, ಸುಮ್ನೆ ಯಾರಾರೋ ಮೇಲೆ ಕಸ ಎಸ್ಯೋದ್ರಿಂದ ಎನೂ ಸಿಗಲ್ಲ? ನಮ್ಮ DVG, ಬೇಂದ್ರೆ, ಕುವೆಂಪು, ಮಾಸ್ತಿ ಇವ್ರ್ಗಳ ಕೃತಿಯಿಂದ quote ಮಾಡಿ, ಇವರ ಬಗ್ಗೆ ಸ್ವಲ್ಪ ಆವಾಗಾವಾಗ ಬರೀರಿ, ನಮಂತವ್ರ್ಗೆ ತಿಳ್ಸಿ, ಕಲಿಸಿ!! ಇದನ್ನ ಸಾಕಷ್ಟ್ ಕನ್ನಡಿಗರು ಓದ್ತಾ ಇರ್ರ್ತಾರೆ, ಇದಕ್ಕಿಂತಾ ಕನ್ನಡ ಸೇವೆ ಬೇರೆ ಇಲ್ವೆನೋ ಅನ್ಸುತ್ತೆ.

ಚೆನ್ನಾಗಿದೆ ಈ ಫೋರಮ್.

Anonymous ಅಂತಾರೆ...

ಒಳ್ಳೆಯ ವಿಶ್ಲೇಷಣೆ!

ಚಿನಿವಾರ ಪಕ್ಕಾ ಆರೆಸ್ಸೆಸ್ಸು. ಈ ಆರೆಸ್ಸೆಸ್ ನವರಿಗೆ ನಿಜವಾಗಲೂ ಕೆಲಸ ಮಾಡಕ್ಕೆ ಸೋಮಾರಿತನ. ಬರೀ ಸಂಸ್ಕೃತಿ, ಸಂಸ್ಕೃತ ಅಂತ ದೊಡ್ಡದೊಡ್ಡ ಮಾತನ್ನು ಆಡುವುದು ಮಾತ್ರ ಇವರಿಗೆ ಗೊತ್ತಿರೋದು. ಆ ಸಂಸ್ಕೃತಿ ಅಂದ್ರೆ ಏನೂಂತ ಅರ್ಥವಾಗದೇ ಇದ್ರೂ ಸರಿ, ಮಾತಾಡೋದು ಮಾತ್ರ ಸಾಕಷ್ಟು ಮಾತಾಡ್ತಾರೆ!

ರೀ ಅನಾನಿಮಸ್ಸಪ್ಪ - ಪಾಜಿಟಿವ್ವು ಪಾಜಿಟಿವ್ವು ಅಂತೀರಲ್ಲ, ಕನ್ನಡಿಗರು ಈ ರೀತಿ ಯೋಚ್ನೆ ಮಾಡ್ತಿರೋದೇ ಪಾಜಿಟಿವ್ವು. ಅರ್ಥ ಮಾಡಿಕೊಳ್ಳಿ!

Anonymous ಅಂತಾರೆ...

ಅನಂತ 'ಜನಿವಾರ'! ಎನ್ಬರಿಯಕ್ಕೆ ಒಂಟವ್ರೆ ಗುರು? ಒಳ್ಳೆ ಭೇತಾಳನ್ ಕಥೆ ಇದ್ದಂಗದೆ, ಆದ್ರೆ ಈ ಸಲ ಬೇತಾಳನ್ ತಲೆ ಎಗರೋದೆ ಖರೆ!

ಕೈಲಾಸಂ-ವೈಎನ್ಕೆ ಎನಾದ್ರಿಗಿದ್ದಿದ್ರೆ ಜನಿವಾರನ್ ಕನ್ನಡಿಂಗ್ಲೀಷ್ ಓದಿ ತಡ್ಕಳಕಾಗ್ದೆ ಐಟಿಸಿ-ಕೋಡೆ ಫ್ಯಾಕ್ಟರಿಗೆ! ಬೆಂಕಿ ಹಚ್ಬಿಬಿಡ್ತಿದ್ರು!

ಇವರಂತವ್ರಿಂದ್ಲೆ 'ಸಿಂಪಲ್ಲಾಗ್ ಎಳ್ತೀನ್ ಬಾರೆ ನಮ್ಮೂರ ಭಾಷೆ' ಅನ್ನೋ ಆಡ್ಗಳು ಹುಟ್ಕೊಂಡ್ವೇನೋ.

ಗುರು, ಎನ್ಗುರೂ ನೀನು, ಎಷ್ಟ್ ಚೆನ್ನಾಗಿ ಬಿಡ್ಸೇಳಿದಿಯ.

ನೀನೇನ್ ತೆನಾಲಿ ರಾಮನ್ ತಮ್ಮಾನ!!

Anonymous ಅಂತಾರೆ...

ಒಳ್ಳೆಯ ಲೇಖನ. ನಮ್ಮ ಸುತ್ತ ಮುತ್ತ ನಡೆಯುತ್ತಿರೊ ವಿಶಯಗಳನ್ನ ಕನ್ನಡದ ಕಣ್ಣಿಂದ ನೋಡಿ ವಿಚಾರ ಮಾಡಿ ತಿಳಿಸುವ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುತ್ತಿದ್ದೀರ.ಅನಾನಿಮಸ್ ಗೆ ಈ ಫೋರಮ್ ನ ಉದ್ದೇಶ ಅರ್ಥ ಆಗಿಲ್ಲ ಅನ್ಸೊತ್ತೆ. ಕುವೆಂಪು, ಬೇಂದ್ರೆ ಅವರ ಬಗ್ಗೆ ಎಲ್ಲ ತಿಳಿಸಿ ಕೊಡುವುದಕ್ಕೆ ಬೇರೆ ಬೇರೆ ಫೊರಮ್ ಗಳು ಇರಬಹುದು. ಆದರೆ ಎನ್ ಗುರು ಥರದ ಫೋರಮ್ ಬಹಳ ವಿರಳ. keep up the good work.

ವ್ಯವಸ್ಥೆನ ಹೇಗೆ ಸರಿಮಾಡೊದು ಅಂತ ಕೂಡ ಹೇಳಿದ್ದರೆ ಅನಾನಿಮಸ್ ಗೆ ಖುಶಿ ಆಗ್ತಿತ್ತೆನೊ.

Anonymous ಅಂತಾರೆ...

ನಮ್ಮ ದೇಶದ ಹೆಸರು 'ಇಂಡಿಯ' ಅಂತ ಮೊದಲು ಬಂದು, ಅದನ್ನೇ 'ಭಾರತ' ಅಂತಾರೆ ಅನ್ನೋದು. ಜಗತ್ತಿಗೆ ನಮ್ಮ ದೇಶ ಗೊತ್ತಿರೋದು 'ಇಂಡಿಯ' ಹೆಸರಿಂದ ಹೊರತು, ಅಮೆರಿಕದಲ್ಲಿ 'ಭಾರತ' ಅಂತ ಮುಖಮುಖ ನೋಡ್ತಾರೆ.

ಈ ಇಂಡಿಯ ದೇಶ ಹುಟ್ಟಿದ್ದೇ ಪರಂಗಿಯವರಿಂದ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಆಫಗಾನಿಸ್ತಾನದಿಂದ ಬರ್ಮವರೆಗೆ ಗೆದ್ದೋರು ಅವರೇ.

ಈ ಬ್ರಿಟೀಸರೇ, ಟಿಪ್ಪೂನ್ ಸೋಲ್ಸಿ, ನಮ್ಮ ದೊಡ್ಡ ಮೈಸೂರು ದೇಶವನ್ನು ನಾಲ್ಕು ಹೋಳು ಮಾಡಿದ್ದು.ಏನು ಇವೊತ್ತು ಮುಂಬಯಿ-ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಕನ್ನಡ ಜಿಲ್ಲೆಗಳು, ಕಾಸರಗೋಡು, ತಮಿಳುನಾಡಲ್ಲೇ ಉಳಿದುಬಿಟ್ಟು ನೀಲಗಿರಿ ಬೆಟ್ಟ, ವಾಯ್ನಾಡು, ಇವೆಲ್ಲ, ನಮ್ಮ ಕನ್ನಡ ನೆಲದಿಂದ ಬೇರೆ ಆದುದು ಆಗಲೇ ೧೭೯೯ರ ಕೊನೆ ಆಂಗ್ಲ-ಮೈಸೂರು ಯುದ್ಧದಲ್ಲಿ.

ಹೀಗೇ ನಾವೆಲ್ಲ ಒಂದೇ, ನಮ್ಮದೆಲ್ಲ ಒಂದೇ ಸಂಸ್ಕೃತಿ ಅಂದ ನಸುಗುಳ್ಳೆ ಬುದ್ದಿ ತೋರಿಸೋದು, ಈ ಹಿಂದೀ, ಉತ್ತರದ ಕಡೆಯೋರ ಅಬ್ಬರ. ಇವರ ಗುರಿ ಇಷ್ಟೇ, ನಮ್ಮ ಸಂಸ್ಕೃತಿ ಅಂದರೆ ಉತ್ತರದ "ಆರ್ಯ ಸಂಸ್ಕೃತಿ", ನಿಜವಾದ ಕನ್ನಡ ಅಂದ್ರೆ ಒಂದು ಮಣ ಸಂಸ್ಕೃತ ತುಂಬಿರುವುದು. ಇವರಿಗೆ ನಮ್ಮ ವಚನಗಳು, ದಾಸ ಸಾಹಿತ್ಯ, ಕುವೆಂಪು ಬೇಕಾಗಿಲ್ಲ. ಆದರೆ ಎಲ್ಲರಿಗೂ ವೇದ, ಭಗವದ್ಗೀತೆ, ಕಾಳಿದಾಸ ಇವರನ್ನ ಮಾತ್ರ ಹೇಳಿಕೊಟ್ಟು, ಅವೇ ದೊಡ್ಡದ್ದು, ಅವನ್ನು ಬಿಟ್ಟು ಮಿಕ್ಕಿದ್ದೆಲ್ಲ ಕಸ ಅಂತಾರೆ.

ಒಂದು ಮರಾಠಿ ಸಂಸ್ಥೆ ಇದೆ, ಅದೂ ನಮ್ಮ ನೆಲಕ್ಕೂ ಹರಡಿಕೊಂಡುಬಿಟ್ಟಿದೆ. ಅದಕ್ಕೆ ಮರಾಠಿ ಬುದ್ದಿಯೇ ಇರೋದು, ಹೊರತು ಕನ್ನಡ ಬುದ್ಧಿಯಿಲ್ಲ. ಈ ಮರಾಠಿಗಳಿಂದ ಕನ್ನಡಕ್ಕೆ ಆದ ಅನ್ಯಾಯದ ಪಟ್ಟಿ ಬಲು ದೊಡ್ಡದು.

ಇಂತದೇ ಮಾತನ್ನು ಈ ದೊಡ್ಡ ಜನ ಹೋಗಿ ತಮಿಳರಿಗೋ, ಬಂಗಾಳಿಗಳಿಗೋ ಹೇಳಿದ್ರೆ,ಮೋರೆಗೆ ಉಗಿದು ಕಳಿಸ್ತಾರೆ. ಈ ತೆವಲು ಏನಿದ್ರು, "ನಾವು ಯಾರು ಎಂದು" ಸರಿಯಾಗಿ ಗೊತ್ತಿರದ, ಇಲ್ಲ ಗೊತ್ತಿದ್ದೂ ಸೋಗಲಾಡಿಗಳಾದ ನಾವು ಕನ್ನಡಿಗರಿಗೆ ಸರಿ!!

ಹೀಗೇ ಆದ್ರೆ, ಕನ್ನಡವೂ, ಮರಾಠಿಯಾಗುತ್ತದೆ.! ಬರೀ ಅಪಭ್ರಂಶ, ತನ್ನದು ಎಂಬ ಬೇರಿಲ್ಲದ್ದು.

Anonymous ಅಂತಾರೆ...

hi enguru,

Neevu bahala chennagi barediddira. Keep doing the good work. Dont worry about people saying stupid things. You are going the right direction.


regards,
Ranganath

Anonymous ಅಂತಾರೆ...

Cannot type in Kannada sorry

Good Article!!

It takes time to some RSS brainwashed heads to know the reality that

"India is a union of States"
Where State can mean a nation, a country too..!!

A state has its own identity!!

Karnataka can be separate nation. There is not valid reason lingually, culturally, geographically to be in India. But we are in India because of

1) Our stupid Maharaja signed that agreement
2) We have accepted without knowing the hidden dangers
3) We Kannadas are damm stupid people on this earth. We have everything good natural resource, human resource etc etc except courage, unity and thinking about our own culture and language.

Sorry again for writing in English.!!

Anonymous ಅಂತಾರೆ...

ಗುರುಗಳೇ,,
ಶರಣು,,ಶರಣು,,ನಮ್ಮ ಭಾಷೆಯ, ನಮ್ಮ ಜನರ ನಾಡಿ ಮಿಡಿತ ಅರಿಯದ ಚಿನಿವಾರ್ ಅಂತವರು ಇ ರೀತಿ ವ್ಯರ್ತ ಪ್ರಲಾಪ ಮಾಡ್ತಾರೆ.
ನಿಮ್ಮ ಅಭಿಪ್ರಾಯದಲ್ಲೆಲ್ಲೂ ಅನಂತ ಚಿನಿವಾರ್ ವಿರುಧ್ದ್ personal ಆದ ಟೀಕೆ ಇಲ್ಲ. ಆದರು ಭಾಷೆಯ ಬಳಕೆಯಲ್ಲಿ ಇನ್ನೊಂಚುರು ಹಿಡಿತ ಇರಲಿ ಗುರು. ಅರೆ-ಬರೆ ಬೆಂದ ಕನ್ನಡದ ಅದೆಷ್ಟೊ ಮನಸ್ಸುಗಳನ್ನು ಇ ವೇದಿಕೆಗೆ , ಇ blog ಗೆ ತರುವ ಪ್ರಯತ್ನಗಳು ಆಗ್ತಾ ಇದೆ. ಹೀಗಿರುವಾಗ ನಿಮ್ಮ ಭಾಷೆಯ ಬಳಕೆ, ಆ ಅರೆ-ಬರೆ ಬೆಂದ ಕನ್ನಡದ ಮನಸ್ಸುಗಳಿಗೆ fanatic ಆಗಿ ಕಾಣಬಾರದು. ಇಲ್ಲಿ ನಡೆಯುತ್ತಿರುವ ಕನ್ನಡ ಜಾಗ್ರುತಿ ಹೀಗೆ ನಡಿತ ಇರಲಿ. Great going and way to go Guru !.

Anonymous ಅಂತಾರೆ...

ನಿನ್ನಿ ವಿ.ಕ ಓದಿದ ಕೂಡಲೆ ಅನ್ಕೊಂಡೆ,, ಏನಾಗೆತ ಪಾ ಇ ಚಿನಿವಾರ್ ಸಾಹೇಬ್ರಿಗ್ ಅಂತ. ಏನೇನೋ ಹೇಳಾಕ ಹೋಗಿ ಅವನೌನ್ full confuse ಆಗ್ಯಾರ್ ಚಿನಿವಾರ್ ಸಾಹೇಬ್ರು. ಅಲ್ರಿ,, ನಮ್ಮ ಭಾಷಾಕ್ ಎಂಥಾ ಪರಿ ತ್ರಾಸ್ ಬಂದೆತಿ ಅಂತ ಇ ನನ್ನ ಮಕ್ಕಳಿಗ್ ಯಾವಾಗ್ ತಿಳಿತೆತೊ?. ಮೊದಲು ನಮ್ಮ ಮನಿ ಸರಿ ಮಾಡಕೋಳ್ಳುದ್ ನೋಡಪಾ ಅಂದ್ರ ಸುಳ್ಳ್ ಕೆಲಸಕ್ಕ್ ಬರದಿದ್ದ ಮಾತಾಡತಾರ್, ಇವರೆಲ್ಲ ಯಾವ್ ಸೀಮಿ journalistgaLo ಏನೋ... ಬಾಳ್ ಚಲೋ ಕೆಲಸಾ ಮಾಡಾಕತ್ತಿರಿ.. ಹಿಂಗ ಇನ್ನು ಬರೀರಿ ಗುರುಗಳ..

Anonymous ಅಂತಾರೆ...

ಚಿನಿವಾರನಿಗೆ ನಾನೊಬ್ಬ ಬುದ್ಧಿಜೀವಿ ಅನ್ಸ್ಕೊ್ಳೊಕ್ಕೆಆ ಸೆಯಾಗಿದೆಅನ್ಸುತ್ತೆ. ಏನೊ ಬರಿಯೂಕ್ಕೆ ಹೋಗಿ ’ಅನಂತನ ಅವಾಂತರ’ ಮಾಡ್ಕೊಂಡಿದ್ದಾನೆ ಪಾಪ. ಅವ್ನಿಗೆ ನಾನು ಏನ್ ಹೇಳ್ಬೇಕು ಅನ್ತ ಹೊರ್ಟಿದೀನಿ ಅನ್ನೊದ್ರಲ್ಲೆ ಕನ್ಪ್ಯುಜನ್ ಇದೆ..

ಭಾಸ್ಕರ ಮೈಸೂರು ಅಂತಾರೆ...

ಮಾನ್ಯ ರವಿ ಅವರೇ RSS ಬಗ್ಗೆ ಮನ ಬಂದಂತೆ ಮಾತಡಬೇಡಿ, ನಾನು RSS ಸ್ವಯಂಸೇವಕ, ಆದರೆ ನೀವು ಅಂದುಕೊಂಡಂತೆ ಸೋಮಾರಿತನ ಯಾರು ಅಲ್ಲಿ ಕಲಿಸಲ್ಲ ಹಾಗೂ ಸೋಮಾರಿ ಆಗಲ್ಲ ,
ಬೇಡದ ವಿಷಯದ ಬಗ್ಗೆ ಅನಗತ್ಯ ಚರ್ಚೆ ಬೇಡ

Anonymous ಅಂತಾರೆ...

ಭಾಸಿ ಅವರೆ,

ಬೇಜಾರು ಮಾಡಿಕೊಳ್ಳಬೇಡಿ. ನಾನು ಹೇಳಿದ್ದು ಬೌದ್ಧಿಕ ಸೋಮಾರಿತನ ಎಂದು. ಅದು ನಿಜವಾಗಲೂ ಇಲ್ಲದಿದ್ದರೆ ಭಾರತದ ವೈವಿಧ್ಯತೆ ಆರೆಸ್ಸೆಸ್ಸಿಗೆ ಒಂದು "ಬಿರುಕು" ಅನ್ನಿಸುತ್ತಾ ಇರಲಿಲ್ಲ.

ಭಾಸ್ಕರ ಮೈಸೂರು ಅಂತಾರೆ...

preetiya ravi..

ella samasthegaLante RSS ge kooda sidantha ide and avaru adanna follow madthare.. but at the same time they never ask you to leave your regionality and call yourself only indian.. atleast from my past 25 years with RSS, no one has made any comments abt kannada or kannadiga.

About your comment "bhauddika somarithana" adu kelavu murkha janara kalpane ashte.. RSS yavattu deshada vaividhyathena kadegaNisilla.. bahusha adonde kade innu namma vaividhyate sarruva aatagaLu, paatagaLu nadeyodhu..

karnatakadalli RSS nadeso shalegaLu kannadane bodahane madta ive.. nanu bhagavahisiruva halavaru bhauddik vargagaLu, sabhegaLu kannadadalle nadedirodhu.. sri Vidyanana shenoi avara Bharata darshana nadedidde kannadadalli... RSS na ella pramukha graMthagaLu deshada ella bhaashegaLallu prakata vaguttave.. idu salade namma bhasha vaividyathe na gurutisakke?

innu nivu charche madabekiddalli nanna id bhasi.mysore@gmail ge maadi. i blog nalli idara charche beDa..

above all.. i chinivara RSS vyakti allave alla..

Anonymous ಅಂತಾರೆ...

ಭಾಸಿ ಅವರೆ,

ನೀವು ಬರೆದದ್ದು:
from my past 25 years with RSS, no one has made any comments abt kannada or kannadiga.

ಅದನ್ನೇ ನಾನೂ ಹೇಳಿದ್ದು. ಆರೆಸ್ಸೆಸ್ಸಿಗೆ ಕನ್ನಡ-ಕನ್ನಡಿಗ-ಕರ್ನಾಟಕಗಳು ಗೌಣ. ನೀವು 25 ವರ್ಷ ಅಲ್ಲ, ಇಡೀ ಜೀವನ ಕಾದರೂ no one in RSS will make any comment about kannada or kannadiga!

And here the whole point is that one should make comments about kannada and kannadiga - the right comments, that is.

Anonymous ಅಂತಾರೆ...

bhasiravare,

Ide RSS navaru maanyata nagaradalli ondu dodda kaaryakrama erpadisiddaru. Adara hesaru nanage jnapaka barutilla. Adu sumaaru 50,000 swayamsekaranna serisi nadeda kaaryakrama. Adara mukystaraada sarasangachaalakaru karnatakada swayamsekarige bodane maadiddu hindiyalli, adu kannadaanuvaada kooda illade! idu kannadigara bagge abhimaana na? athava asadde na? innondu vishaya andre RSS na shaakegaLalli hindi padagaLannu yaake baLasuttaare?
kannadada mele hindi herika na?

nimmava,
Sunil

Anonymous ಅಂತಾರೆ...

ಅಯ್ಯೋ ಸ್ವಾಮಿಗೊಳ.. ಬಿಡ್ರೀ ಆ RSSಅನ್ನ!

ಅದಕ್ಕೆ ಅವರ ಹುಟ್ಟೂರಾದ ಮಹಾರಾಸ್ಟ್ರ, ಉತ್ತರ ಪ್ರದೇಸದಲ್ಲೇ ಜಾಗ ಇಲ್ಲ. ನೋಡಿ ಸಿವಸೇನೆ, ಬಾಜಪ ಇವೆಲ್ಲ ಅಲ್ಲಿ ತೋಪು.

ಅವರ ಬಗ್ಗೆ ಮಾತಾಡೋದು ಬರೀ ಟೈಂ ವೈಸ್ಟು.

ತಮಿಳ್ನಾಡಲ್ಲಿ, ಆಂದ್ರದಲ್ಲಿ, ಕೇರಳದಲ್ಲಿ, ಈ RSS, BJP ಏನ್ ಕಿಸಿಯಕ್ಕೂ ಆಗಕ್ಕಿಲ್ಲ. ಏಕೆಂದರೆ ಅಲ್ಲಿ ಅವರವರ party ಗಳನ್ನು ಬಲ ಮಾಡಿಕೊಂಡವ್ರೆ.

ಏನ್‌ಗುರು ಹೇಳೋ ವಿಸಯ ನೋಡ್ರಿ. ಯಾವೋನು ಬಂದು ಬುಟ್ಟು, ನೀವು ಜುಬ್ಬ ಹಾಕ್ಕೋ, ಪೈಜಾಮ ಹಾಕ್ಕೋ, ಹಿಂದಿ ಮಾತಾಡು, ಗೋದಿ ಉಣ್ಣು, ಆಗಲೇ ನೀನು ನಮ್ಮ ದೇಸದಾಗೆ ಇರಕ್ಕೆ ಲಾಯಕ್ಕು ಅಂದ್ರೆ ಅವನ ಕಪಾಳಕ್ಕೆ ನಾಲು ಚಪ್ಪಲಿ ಹೊಡೆದು ಕಳಿಸಿದ್ರಾಯ್ತು. ಸುಮ್ನೆ ಮಾತು-ಗೀತು ದಂಡ!

ಒಂದು ಗಾದೆ, "ಬಂಡ ಬೂತ ಒಳ್ಳೇ ಮಾತ್ಗ ಹೋಗಕ್ಕಿಲ್ಲ, ಅದಕ್ಕೆ ಚಪ್ಪಲೀಲೇ ಹೊಡೀಬೇಕು"!

ಭಾಸ್ಕರ ಮೈಸೂರು ಅಂತಾರೆ...

preetiya ravi..

RSS ondu rashtra mattada sangha.. avara siddanthagaLe bere..
alli iro kannadigaru kannada mataduttare ashtu saku..

mangaLurina sabheyalli manya sarasanghachalakara BHashanana Sri dinesh kamat ru kannadadalli anuvada madidru,, haagu aa karyakramadalli naanu idde..
nanu nanna RSS jeevanana hIge kaLitini,,

kannadada seve nanu maadabeku adhu mukhya, mattu adhu hege madabeku antha nanage gottide..

RSS na kannadada bagge comment maadi antah apekshisodhu ashtu samanjasa alla antha nanna bhavane.. adara uddesha rashtra maTtaddu.. mattu adara yashassu , phala alli iddorige gottide.. summane key board ide antha type maadodrinda sukha illa.,


innu yaro obbaru jubba paijama da bagge matadidare.. haagu kapaLakke hodiveku antha andidare.. aadre avaru yara bagge matadta iddare antha gottagtha illa., ashtu dhairya iroru,, shivaji chitra release maadida gangaraju ge kapaLakke hoDili? avaru kannadada anna thindu kaveri nIru kuDidu ille iddu kannadigarige droha madta idare shivaji fima release maaDi?. key board ide antha summane type madidre enu sukha illa.., aa reeti bareyokke munche atleast thavu kannadigarige kannadakke enu madtha idini antha athmavalokama madikoLLali.. company li atleast 10 janakke kannada kalista idina nanu.. athava kannada kelsa madta irorige pratyaksha paroksha sahaya madta idina antha omme yochisali..

Anonymous ಅಂತಾರೆ...

guruve Bhasi,

Nimma RSS nalli snehasethu amta ondu samste bagge tiLiddidare heLtira? Adu rashtra mattada telugara sanghataneye?

nimmava,
Gowda

Anonymous ಅಂತಾರೆ...

Haudu ree Bhasi,

RSS navaru bharatamaateya photo ge chappali haara haakovaaga adanna tadediddu ondu kannada sanghatane, idara bagge RSS yava rashtrada bagge yochane maadta ittu.

ಭಾಸ್ಕರ ಮೈಸೂರು ಅಂತಾರೆ...

manya gowdare

snehasethu idu kelavu swayamsevakaru maadikondiro sanghatane.. idu kannada virodi kelsa enadru madidye? svalpa tiListira? enadru information idre pls tiLisi.

bengaLurinalli chappali haara hakidoru para bhashikare swamy? svalpa aa sanghatane hesaru heLtira?


namma TA narayaNa gowdarige chaLuvaLi prerepaNe kottidde RSS na Durgappa Shetty pls read this link!

http://en.wikipedia.org/wiki/Narayana_Gowda

Anonymous ಅಂತಾರೆ...

ಈ ಬಾಸಿ ವಯ್ಯಂಗೆ ಪುಲ್ brain wash!! :)

ಈ ಇವನು ಹೇಳದ್ದನ್ನೆ ಹೇಳೋದು taperecoder ತರ!

RSS ಕೆಲಸಾನೂ ಅಸ್ಟೇ, ಅಲ್ಲಿ ಮರಾಟಿಗಳು ಕಿವಿಗೆ ಊದಿದ್ದನ್ನ ನಮಗೆ ಒಳ್ಳೆಯದೋ, ಕೆಟ್ಟದ್ದೋ ಅಂತ ನೋಡದೇ ಬಂದು ಇಲ್ಲಿ ಒದರೋದು!!

ರಾಮ ರಾಮ!! ಇವರೂ ಕನ್ನಡಕ್ಕಿಂತ, ಮರಾಟಿಗಳು ಅಂತ ಕರೆಕೊಂಡ್ರೆ ಒಳ್ಳೇದು!!

ಭಾಸ್ಕರ ಮೈಸೂರು ಅಂತಾರೆ...

ri swamy

nanu kannadigano maratigano antha yavando kaili heLisi kollabekada avashyakate nanage illa.. nanu kannadakke enu kelsa madta idini,/maadidini , nanna kannadabhimana yenu antha, hearu heLakoLlakku dhairya illadavana munde bichchi toriso agathya nanage illa.
modalu nanna prashne ge uttare koDi swamy? chappali hara hakidoru para bhashikare? bere eno baredare enu sukha? dhiarya iddare chappali hara hakidralla avarige ugidu, nimma nijavada hesaru viLasa kottu patrikeli ugidu bareyiri. AAmele maataDi.

haage nanna brain wash aagide antha tiLisidakke dhanyavaada.

Anonymous ಅಂತಾರೆ...

ಹ ಹ

ಈ ವಯ್ಯಂಗೆ ನಿಜವಾದ ಹೆಸರ ಬೇರೆ ಹೇಳಬೇಕಂತೆ..

ಯಾವೋನ್ ಹೆಸರು 'ಬಾಸಿ' ಅಂತ ಇರುತ್ತೆ? :)
ಇದಕ್ಕೂ ಸಿವಾಜಿ ಎತ್ತಿಂದೆತ್ತಣ ಸಂಬಂದವಯ್ಯ!! ಸಿವಾಜಿ ಬಗ್ಗೆ ಯಾರು ಯಾರು ಮಾತಾಡ್‌ಬೇಕಿತ್ತೊ ಅವರು ಮಾತಾಡೇ ಅವ್ರೆ. ಏನು ತಮಿಳು ಸಿನಿಮಾ ಓಡೋದು ಮೊದಲ ಇಲ್ಲಿ? ಹಂಗಾರೆ ಹಿಂದಿ ಸಿನಿಮ ಬಗ್ಗೆ ನಿಮ್ಮ ಆರೆಸ್ಸ್ಸ್ಸ್ಸು ಹೋರಾಡಿ ನಿಲ್ಸುತ್ತೆ? ಹಿಂದಿ ಸಿನಿಮ ನಿಲ್ಸಿದ್ರೆ ಮರಾಟಿಗಳಿಗೆ ಅಲ್ವಾ ನಸ್ಟ!

ಅಯ್ಯಆರೆಸ್ಸ್ಸಸ್ಸು.. ವಸಿ ಸುಮ್ಕಿರು.. ನಮ್ಗೆ ನಿನ್ ಪುರಾಣ ಸಾಕಾಯ್ತು.!!

ಬೊಗಳ ಮೇಲ್ ಬೊಗಳೆ. ಬರೀ ಮಾತು!! ಈ ವಯ್ಯಂಗೇನೋ ಉತ್ರ ಹೇಳಬೇಕಂತೆ, ದೊಡ್ಡ ಮನಿಸ್ಯ!

ಬೆಳಗಾವಿ ಮಹಾರಾಷ್ಟ್ರಕ್ಕೆ ಬೇಕು ಅಂತ ಶಿವಸೇನೆ ಪಟ್ಟು ಹಿಡಿದುಕೊಂಡೈತ್ತಲ್ಲ ಅದಕ್ಕೆ ಏನ್ ಹೇಳತೈತಿ ನಿಮ್ಮ ಆರೆಸ್ಸಸ್ಸು?

ನಮ್ಮ ಪಾಡಿಗೆ ನಾವು ಏನೋ ಮಾತಾಡ್ತಾ ಇದ್ವಿ, ನಂದೆಲ್ಲ ಅಂತ ಬಂದುಬಿಟ್ಟ ಕಡ್ಡಿ ಇಡಕ್ಕೆ!

ಆದ್ಯಾವ ಯಾವ ಕನ್ನಡಸೇವೆ ಮಾಡದೆ ನಿಮ್ಮ ಸಂಗ? ಪಟ್ಟಿ ಹೇಳು ನೋಡುಮ?

ಮತ್ತೆ ಈ taperecoder ಸುಮ್ನಿರಲ್ಲ... ಅದೇ ಅಲ್ಲಿ ಕೇಳಿಸಿಕೊಂಡದ್ದನ್ನ ಇಲ್ಲಿ ವದರುತ್ತೆ :)

"ನನಗೆ ಅಗತ್ಯ ಇಲ್ಲ, ನನಗೆ ಅಗತ್ಯ ಇಲ್ಲ" ನಿಂಗೆ ಅಗತ್ಯ ಇಲ್ಲ ಅಂದ ಮೇಲೆ ಇಲ್ಲೇ ನಿನ್ನ ಮಾತು.. ಚಡ್ಡಿ ಹಾಕೊಂಡು ಉಣ್ಣೋಗು.!! :)

Anonymous ಅಂತಾರೆ...

namaskara friends,

ee chaddigalu bashe visyakke bandre DESHA antha bashana madtarre. aavarana book time nalli ivaru torisida kannada pustakagala bagge preethi, daatu,mandra time nalli iralilla.
RSS nalli Blore nalli kannadalli matadidre ,adu desha droha, sankuchita manobava. adre Telgu jana illi RSS-Telgu madikondiddu oppose madidre, neevu Udharigalalla. kannadigarige ondu nyaya, baaki bashikarige ondu nyaya. ee chaddi-ola chaddi vishya matadodhe dodda waste.

chaddigala grp inda ondu mail bandittu, 7 wonders ge TAJMAHAL vote maadbedi, Thailand nalli iro yavdakko maadi antha.
ivara deshaprema nodi naanu beragaade.

-Mallik

Anonymous ಅಂತಾರೆ...

Dear bhasi, ravi &others,

what are you trying to prove. RSS is good or bad is not the point of discussion here. We should talk about, whether Anant chinivar's viwes & attitudes are correct or defective. Enguru blog nalli yaake kaaDu haraTegaLannu filter maaDtilla.

timmaiah

Anonymous ಅಂತಾರೆ...

mallikಅಣ್ಣ...

ಆ ಆವರಣವನ್ನ ಇವರು ಒಳ್ಳೆ ಟಮೋಟೋ ಮಾರ್ದಂಗೆ ಮನೆ ಮನೆಗೆ ಹೋಗಿ ಮಾರವ್ರೆ.

ಇದೇ ಕೆಲಸವನ್ನ, ಕುವೆಂಪು, ಮಾಸ್ತಿ, ಇವರ ಪುಸ್ತುಕಗಳಿಗೆ ಮಾಡ್ತಾರ?

ಆ ಆವರಣದಲ್ಲಿ ನಮ್ಮ ಕನ್ನಡದೇಶಕ್ಕೆ ಒಳ್ಳೇದು ಮಾಡೋ ಏನಾರ ಐತಾ?
ಪಾಪ ನಮ್ ಸಾಬ್ರು ನಮ್ಮ ಕೂಟೆ ಚಂದಾಗಿಲ್ವ? ಕನ್ನಡನಾಡಲ್ಲಿ ಸಾಬ್ರು vs ಒಕ್ಕಲಿಗರು, ಲಿಂಗಾಯತ್ರು, ಬ್ರಾಮ್ರು ಇವರೆಲ್ಲ ಕಿತ್ತಾಟ ಆಡಿದ್ದೇ ಇಲ್ಲ.

ನಮ್ಮ ಕನ್ನಡನಾಡನ್ನ ಆ ಗುಜಾರತ, ಮಹಾರಾಸ್ಟ್ರ ಮಾಡಕ್ಕೆ ಹೊಂಟವ್ರೆ. ಇದೇ ಶಂಖಾನ ಯಾಕೆ ತಮಿಳು, ತೆಲುಗು ಮಂದಿಗೆ ಊದಲ್ಲ?

ಇರಲಿ ಇವರ ವಿಸಯ..

ನಮ್ಮ ಏನ್‌ಗರು ಅವರು "ಪೊಳ್ಳು ರಾಷ್ಟ್ರೀಯತೆ" ಬಗ್ಗೆ ಚನ್ನಾಗಿ ಬರೆದವ್ರೆ!

ಭಾಸ್ಕರ ಮೈಸೂರು ಅಂತಾರೆ...

bhayotpadaka antha patti kaTTikondu australiya jailinalli koothu karnatakda hesarige masi baLidOnu yaru antha omme yochane madi.,,,,

thamma bhashe nOdidre idu varegu karnatakadalli hindu muslim galaate aage illa.. monne Shivaji nagaradalli saddam hussain ge sraddanjali nepadalli heNa bILisidoru bERe rajyadiMda bandavaruanthane nimma abhipraya?

aavaraNa kannada pusthaka swamy, adanna baredoru kannadadoru odidoru kannadigaru.. adanna thogondoru byrappanavara abhimanigaLu, kannada sahityadalle ondu itihasa nirmisiro pusthakana thavu tomato haNNige holistiralla,. ide torisutte nimma kannada jnana enu antha..

Anonymous ಅಂತಾರೆ...

Goal of RSS from their website "Expressed in the simplest terms, the ideal of the Sangh is to carry the nation to the pinnacle of glory, through organising the entire society and ensuring protection of Hindu Dharma."

They just say protection of Hindu dharma. But we believe that kannadiga is someone who has kannada dharma let him/her belong to any religion, caste, nation, state whatver. So we should protect the whole nation by protecting kannadatana in karnataka, tamiltana in tamilnadu, marathitana in maharashtra etc.

Also RSS speaks mainly in Hindi

Bolo bharat mata ki - jai
Saavadhan
Shakha
Swayamsevak

iwella awara hindi padagaLige udaaharanegalu. Basically RSS vividateyalli ekateyanna dorakisikododaralli ashtu samartharalla eMdu nanna bhawane. Take rainbow for example there are 7 colors. Ella colors idre ne rainbow ge ondu artha barodu haagu it looks beautiful. If one color tries to put its impact on other colors then the whole thing gets either white or black. So bari Hindi(Hindu) dharma protect madidre ella kelsa kettogutte. Ellaru beku kannada naadinallirorella kannadadawaragbeku ashte.

Anonymous ಅಂತಾರೆ...

"bhayotpadaka antha patti kaTTikondu australiya jailinalli koothu karnatakda hesarige masi baLidOnu yaru antha omme yochane madi.,,,,"

ಅಲಲಲಲ!! ಕೊನೆಗೆ ಬಣ್ಣ ಬಯಲಾಯ್ತು

"ಅನಿಸ್ಟಕ್ಕೆಲ್ಲ ಸನೀಸ್ವರನೇ ಕಾರಣ" :)

ಹೋಗಲೋ!! ಇಲ್ಲಿ ನಾವು ಏನು ಮಾತಾಡ್ತಿದ್ದೀವಿ ಗೊತ್ತ?

ಸುಮ್ನೆ ಮಾತಿಗೊಂದು ಮಾತು. ಎಲ್ಲಿಂದ ಎಲ್ಲಿಗೋ ಮಾತು ತಿರುಗಿಸಿ ಬಿಡೋದು.

ಈ ವಯ್ಯ ಕನ್ನಡದ ಕಡೆಗೆ ಹೇಳಿದ್ದು "ಸಿವಾಜಿ ವಿಸಯ" ಬೇರೇನು ಇಲ್ಲ..

ಏನ್‌ಗುರು ಇವನನ್ನು ಒದ್ದು ಓಡ್ಸಿ. ಬಂಡ! ಸುಮ್ನೆ ನಮ್ಮ ದಿಕ್ ತಪ್ಪಿಸ್ತಾನೆ!

ಬನವಾಸಿ ಬಳಗ ಅಂತಾರೆ...

ಗೆಳೆಯರೆ/ಗೆಳತಿಯರೆ,

ಇಲ್ಲಿ ಅನಿಸಿಕೆ ಬರೆಯುವವರು "ನಿಜವಾದ ರಾಷ್ಟ್ರೀಯತೆ ಎಂದರೆ ಏನು?" ಎನ್ನುವ ವಿಷಯವನ್ನು ಬಿಟ್ಟುಹೋಗದಿರಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ.

ಅನಿಸಿಕೆಗಳನ್ನು ಯಾವುದೇ ವ್ಯಕ್ತಿ ಇಲ್ಲವೇ ಸಂಘಟನೆಗೆ ಸೀಮಿತವಾಗಿಡದೆ ತಾತ್ವಿಕವಾಗಿರಲಿ.

ನಾವು ಯಾವಾಗಲೂ ಹೇಳುವಂತೆ...ನೀವು ಅನಿಸಿಕೆ ಬರೆಯುವ ಮುನ್ನ ನಿಮ್ಮನ್ನು ನೀವೇ ಕೇಳಿಕೊಳ್ಳಿ: "ಈ ನನ್ನ ಅನಿಸಿಕೆಯಿಂದ ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳ್ಗೆಗೆ ಹೇಗೆ ನೆರವುನೀಡಿದಂತಾಗುತ್ತದೆ?" ಅಂತ.

ಪವನ ಪಾಟೀಲರೆ,

ಬರಹಗಳು ಒಸಿ ಹಳ್ಳೀನಾಗ್ ಮಾತಾಡ್ದಂಗೆ / ಆಡುನುಡಿಯಲ್ಲಿ ಇವೆ ಅನ್ನೋದೇ ನಿಮಗೆ ಹಿಡಿತದ್ ಕೊರ್ತೆ ಅನ್ನಿಸ್ತಿದ್ಯಾ? ಇಲ್ಲಾ ಎಲ್ಲಾದ್ರೂ ಕೆಟ್ಟ ಪದಗಳನ್ನೇ ಉಪಯೋಗಿಸಿದ್ದೇವೆ ಎನ್ನುತ್ತಿದ್ದೀರೋ? ಗೊತ್ತಾಗಲಿಲ್ಲ. ದಯವಿಟ್ಟು ತಿಳಿಹೇಳಬೇಕಾಗಿ ಕೋರಿಕೆ.

ತಿಮ್ಮಯ್ಯ ಅವರೆ,

ಇಲ್ಲಿ ಕಾಡುಹರಟೆಯನ್ನ ಯಾಕೆ ಬಿಡುತ್ತಿದ್ದೇವೆ ಎನ್ನುವ ನಿಮ್ಮ ಪ್ರಶ್ನೆ ಸಾಧುವೇ. ಎರಡು ಕಾರಣಗಳು. ಒಂದು - ಜನರ ಅನಿಸಿಕೆಗಳಿಗೆ ಕಡಿವಾಣ ಹಾಕದೆ ಮನಬಿಚ್ಚಿ ಮಾತನಾಡಲಿ ಎನ್ನುವ ಹಂಬಲ. ಎರಡು - ಇಲ್ಲಿ ಬರೆಯುವ ಅನಿಸಿಕೆಗಳನ್ನೆಲ್ಲ ನೋಡಿ ನೋಡಿ ಬಿಡುವುದಕ್ಕೆ ಪುರಸೊತ್ತಿಲ್ಲದಿರುವುದು.

Anonymous ಅಂತಾರೆ...

ಗುರುಗಳೇ,

ಹಿಂಗೆ ತಮ್ಮ ಗುಂಪು, ತಮ್ಮ ಧರ್ಮ, ತಮ್ಮ ಕರ್ಮ ಅಂದ ಕನ್ನಡವನ್ನು ಮೂಲೆಗೆ ಮಾಡಿ ಮಾತಾಡೋರ್ನ ಮುಲಾಜಿಲ್ದೆ, ಕಿತ್ತು ಹಾಕಿ!!

ಸುಮ್ನೆ ಇವರದೊಂದು ತರಲೆ! ಎಲ್ಲಿ ಹೋದ್ರು ನಂದೊಂದು ಅಂತ.

ನನ್ನ ಮಾತಿಂದ ನಿಮಗೆ ಬೇಜಾರಾಗಿದ್ರೆ ಸಮಿಸಿ!

Anonymous ಅಂತಾರೆ...

koneyadaagi bhaasi awaralli ondu korike. aa nimma sanghataneyalli hindi slogan gala badalige kannadadalli ghoshane koogisalu aagutta? iwaaga upayogisuttiruwa hindi vaakyagalannella kannadakke bhaashantarisi awanne upayogisalu nimma sanghada mukhyastharige heluwudakke agutta?

at least ashtaadaru kannadatana awaru torisali allawe?

haageye neewu ade sanghataneyalliddukondu kannadakke seve maadidantaguttade allawe?

Anonymous ಅಂತಾರೆ...

ಗೆಳೆಯರೆ, ಅದರಲ್ಲೂ bhasi ಅವರೆ,
ಈ ಚರ್ಚೆಯಲ್ಲಿ RSS ಬಗ್ಗೆ ಇಷ್ಟೋಂದು ವಿಚಾರಗಳು ಎದ್ದಿರೋದು ನೋಡ್‍ದ್ರೆ ಆಶ್ಚರ್ಯ ಏನಿಲ್ಲ ಅನ್ನ್ಬೋದು..

ಆದರೆ bhasi ಅವರೆ, ನಿಮ್ಮ ಮಾತುಗಳಲ್ಲಿ ಈ ಭಾಗ ಒಂದನ್ನು ತಿರ್ಗ ಗಮನಿಸಿ:
"RSS na kannadada bagge comment maadi antah apekshisodhu ashtu samanjasa alla antha nanna bhavane.. adara uddesha rashtra maTtaddu.. mattu adara yashassu , phala alli iddorige gottide.. summane key board ide antha type maadodrinda sukha illa.,"

ಮೇಲೆ ದಪ್ಪಕ್ಷರದಲ್ಲಿರೋ ಭಾಗದ ಸರಿಯಾದ ಅರ್ಥ ಗೊತ್ತೆ ನಿಮಗೆ? ನಿಮ್ಮ RSS ಬಗ್ಗೆಯ ನಿಲುವನ್ನು ಬೀಳಿಸುವ ಮಾತು ಇದು. RSSದು ರಾಷ್ಟ್ರೀಯ ಮಟ್ಟದ ಯೋಚನೆ ಅಂತ ಹೇಳ್ತೀರಲ್ಲ, ಅದರಲ್ಲಿ ಇಲ್ಲಿ ಎಲ್ಲರಿಗೂ ಸಿಗುವ ಅರ್ಥ ಏನೆಂದರೆ, ರಾಷ್ಟ್ರೀಯ ಮಟ್ಟ್ಟದಲ್ಲಿ ರಾಜ್ಯ ಮಟ್ಟದ ಯೋಚನೆ ಮರೆಯಬೇಕು ಅಂತ. "ಇಡೀ ದೇಶದ ಯೋಚನೆ ಮಾಡುವಾಗ ನಿಮ್ಮ ಸ್ವಂತ ರಾಜ್ಯವನ್ನು ಮರೆ" - ಇದೇ RSS ಮಾಡುವ ಭೋದನೆಯೇ? ಅಥವಾ ನೀವು RSSನ ಅರ್ಥ ಮಾಡಿಕೊಂಡಿರುವುದು ಹಾಗೋ?

ಅದೆಲ್ಲಾ ಹಾಗಿರಲಿ, RSSನಲ್ಲಿ ನಾ ಕಂಡ್‍ಹಂಗೆ, ದೇಶದ ಬಗ್ಗೆ ಏನೋ ಸಕ್ಕತ್ ಕೆಮ್ಮ್‍ತಾರೆ, ಆದ್ರೆ ಈಗಾಗ್ಲೆ blogನಲ್ಲಿ ಬರೆದಿರುವ ಹಾಗೆ ನಮ್ಮ ದೇಶದ ಆಸ್ತಿ ಅದರ ವೈವಿದ್ಯತೆ. ಅದರ ಬೇರೆ ಬೇರೆ ಭಾಷೆಗಳು. RSS ಈ ದೇಶವನ್ನು glory ಕಡೆ ಒಯ್ಯಬೇಕು ಎಂದಿದ್ದಲ್ಲಿ ಅವರು ಇದನ್ನು ಮೊದಲು ಅರಿತುಕೊಳ್ಳಬೇಕು.

RSSನ ನಡೆಸುತ್ತಿರುವ ಜನರು ಒಳ್ಳೆಯರೇ ಆಗಿರಬೋದು, ಆದರೆ ಅವರಿಗೆ ಇಡೀ ದೇಶದ ನಿಜವಾದ ಬೇಡಿಕೆ ಗೊತ್ತಿಲ್ಲ. ಕೇವಲ ತಮ್ಮ ಸುತ್ತ-ಮುತ್ತಲಿನ ಬೇಡಿಕೆ ತಿಳ್ಕೊಂಡಿದಾರೆ ಅವರುಗಳು. ಅದನ್ನ ಪೂರೈಸಲು ಇಡೀ ದೇಶವನ್ನು involve ಮಾಡ್ತಿದಾರೆ!! ಅಲ್ಲವೆ?

ಇನ್ನು ಈ ಮಾತಿಗೆ ನೀವು ಏನು ಹೇಳುವಿರಿ, ಸ್ವಲ್ಪ ತಿಳ್ಸಿ..

-ರೋಹಿತ್

Anonymous ಅಂತಾರೆ...

ಏನ್ ಖತರ್ನಾಕ್ ಬರ್ದರಿ ಗುರುಗಳ, ಓದಿದವರ ಮುಕಳಿ ಹಂಗ ಕಂವಾ ಕಂವಾ ಕಂವಾ ಕಡಿಬೇಕ್, ಹಿಂಗ ನಡಸ್ಕೊಂಡ್ ಹೋಗ್ರಿ,ಛಲೋ ಆಕ್ಕೈತಿ.

ಭಾಸ್ಕರ ಮೈಸೂರು ಅಂತಾರೆ...

for those who called me maraThi , thanks, i dont know what is their contribution in this matter ,rather than using language which is uncalled for , but i have wrote to Mr Anantha chinivar yesterday and i am posting a copy of that here..
though i didn't wanted to copy that here.. some comments made me to do so. my sincere thanks to them.. avara kannaDABhimAna haage moLagutta irali..

ನಮಸ್ಕಾರ ಶ್ರೀ ಅನಂತ ಚೀನಿವಾರರೆ,

ಬುಧವಾರ ನಮ್ಮ india ಬಗ್ಗೆ ನಿಮ್ಮ ಲೇಖನ ಓದಿದೆ.. ಇದು ನಿಮ್ಮ ಎರಡನೇ ಲೇಖನ ನಾನು ನೋಡಿರೊದು, ಇತ್ತೀಚೆಗೆ reality show ಬಗ್ಗೆ google ನಲ್ಲಿ ನಿಮ್ಮ ಲೇಖನ ಸಿಕ್ಕಿತ್ತು.
ನಿಮ್ಮ ಲೇಖನ ಓದಿದ ಮೇಲೆ ನನಗೆ ಕೆಲವು ಸಮಸ್ಯೆಗಳು ಉದ್ಭವಿಸಿವೆ..
೧) ನೀವು ಏನು ಬರೀಬೇಕು ಅಂತ ಮೊದಲೇ ತೀರ್ಮಾನ ಮಾಡಿಕೊಂಡಿದ್ರ?
೨) ನಿಮ್ಮ ಲೇಖನ ಒಂದು ರೀತಿ ಪ್ರಶ್ನೆ ಪತ್ರಿಕೆ ತರ ಇದೆ ಅನ್ನಿಸೊದಿಲ್ಲವೆ?
೩) ಈ ಲೇಖನ ಬೇರೇ ಭಾಷೆಗಳಲ್ಲೂ ಪ್ರಕಟ ಮಾಡಿದ್ದೀರಾ? ಅಥವಾ ಮಾಡ್ತಿರಾ?
೪) ನಿಮ್ಮ ದೃಷ್ಟಿಯಲ್ಲಿ ದೇಶ ಅಂದರೆ ಏನು?
೫) ನಿಮ್ಮ ಲೇಖನ ದ್ವಂದ್ವಗಳಿಂದ ಕೂಡಿದೆ ಅಂತ ನಿಮಗೆ ಅನ್ನಿಸಿಲ್ಲವೆ?


ಇನ್ನು ಕೆಲಸದ ವಿಷಯ.. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ಕೊಡಿ ಅಂದರೆ ತಪ್ಪೇನು ಸ್ವಾಮಿ? ನಮ್ಮ ನೆಲ, ಜಲ ಬಳಸುತ್ತಿರುವ ಕಂಪನಿಗಳು, ನಮಗೆ ಉಪಯೋಗಕ್ಕೆ ಇಲ್ಲದಿದ್ದರೆ ಏನು ಸುಖ? "ಊಟಕ್ಕೆ ಇಲ್ಲದ ಉಪ್ಪಿನಕಾಯಿ ಆಟಕ್ಕೆ ಯಾಕೆ?".. ಇದು ಸರಿ ತಾನೆ?

ಇನ್ನು ನೀವು ಬರೆದಿರುವುದು ನೀರಿಗಾಗಿ ಹೋರಾಟ.. ಹೌದು .. ನಮಗೆ ಇದ್ದರಲ್ಲವೆ ಇನ್ನೊಬ್ಬರಿಗೆ ಕೊಡುವುದು? ನಮ್ಮ ನಾಡೀನಲ್ಲಿ ಹರಿಯುವ ನದಿ, ನಮ್ಮ ರೈತರ ಜಮೀನಿನಲ್ಲಿ ಅದಕ್ಕೆ ಅಣೆಕಟ್ಟು ಕಟ್ಟೀ ನೀರು ಸಂಗ್ರಹಿಸುತ್ತೇವೆ.. ಅದನ್ನ ರಾಜಕೀಯ ಮಾಡಿ ಬೇರೆಯೋರು ಕೇಳಿದ್ರೆ ಕೊಟ್ಟು ಬಿಡಬೇಕೆ? ಇದು ನ್ಯಾಯವೆ? ನಿಮ್ಮ ಮನೆಯನ್ನ ಇನ್ನೊಬ್ಬ ಬಾರತೀಯ ಕೇಳಿದ್ರೆ ಬಿಟ್ಟು ಕೊಡ್ತಿರ? same logic here.. water, land are all our resources and assetts.. ಅದೇ ರೀತಿ ನಮ್ಮ ನೆಲ ಕೂಡ.. ಯಾರೊ ಕೂಗಾಡುತ್ತಾರೆ ಅಂತ , ಪಕ್ಕದ ರಾಜ್ಯದೋರು ಅಂತ ಬಿಟ್ಟು ಬಿಡಬೇಕೆ? ನಿಮ್ಮ siteನಲ್ಲಿ ೪ ಅಡಿ ಪಕ್ಕದೋನು ಆಕ್ರಮಿಸಿಕೊಂಡ್ರೆ ಸುಮ್ಮನೆ ಇರ್ತಿರ? ನಾಳೆ ನೆ courtಗೆ ಹೋಗ್ತೀರ.. ಇಲ್ಲೂ ಹಾಗೇನೆ.

ಒಂದು ದೇಶ ಹಲವು ರಾಜ್ಯಗಳ ಒಕ್ಕೂಟ,, ಹಾಗು ರಾಜ್ಯಗಳು ರಚನೆ ಆಗಿರೋದೆ ಭಾಷೆಗಳ ಆಧಾರದ ಮೇಲೆ.. ಹೀಗಿರುವಾಗ.. ಪ್ರತಿಯೊಬ್ಬ ಈ ದೇಶದಲ್ಲಿ ತನ್ನ ಅಸ್ತಿತ್ವನ ಹೇಗೆ ತೋರಿಸ್ಕೊತಾನೆ? its obvious , ತನ್ನ ಭಾಷೆಯಿಂದ..

ಇನ್ನು englishನ ಒಪ್ಪಿಕೋಳ್ಳೊದು.. ಯಾಕೆ ಅದು ಅಷ್ಟು ಅವಶ್ಯಕ ಅನ್ನಿಸ್ತ ಇದೆ ನಿಮಗೆ? ಭಾಷೆ ಸಂಪರ್ಕಕ್ಕೆ ಒಂದು ಮಾಧ್ಯಮವೆ ಹೊರತು ಅದೇ ಎಲ್ಲ ಅಲ್ಲ..
ನಾನು ಒಬ್ಬ software engineer.. ನಾನು ಕೂಡ ಬೇರೆ ದೇಶ ಸುತ್ತಿ ಬಂದಿದಿನಿ.. Yes. ನನಗೆ ಅನ್ನಿಸುತ್ತೆ english ಎಲ್ಲ ಅಲ್ಲ ಅಂತ..

ನಿಮ್ಮ ಮಾತಿನಂತೆ ಇಡೀ ದೇಶ english ನ ಒಪ್ಪಿಕೊಂಡ್ರೆ,, ದೇಶದ ಎಲ್ಲಾ ಸಮಸ್ಯೆಗಳು solve ಆಗುತ್ತಾ? english ನ ನಾವು , ಪಕ್ಕದ ರಾಜ್ಯಗಳು ಒಪ್ಪಿಕೊಂಡ್ರೆ, ಅವರು ಕಾವೇರಿ ನೀರು ಕೇಳೊದು ನಿಲ್ಲಿಸ್ತಾರ? ಅಥವಾ ಈ ಕಡೆ ರಾಜ್ಯದೋರು ಬೆಳಗಾವಿ ವಿಷಯನ ಬಿಟ್ಟು ಬಿಡುತ್ತಾರ? ನಿಮಗೆ ಏನು ಆನ್ನಿಸುತ್ತೆ? ಈ ಎರಡು ಉದಾಹರಣೆ ಯಕೆ ಅಂದ್ರೆ.. ಕನ್ನಡಿಗರಿಗೆ ಅನ್ಯಾಯ ಆಗಿದೆ ಇ ವಿಷಯಗಳಲ್ಲಿ.. ಬೇರೆ ಬೇರೆ ರಾಜ್ಯಗಳ ನಡುವೆ ಹಲವಾರಿ ಈ ರೀತಿ ವ್ಯಾಜ್ಯಗಳು ಇರಬಹುದು.. ಆದ್ರೆ lets clean our plare first
ಒಮ್ಮೆ ಯೋಚಿಸಿ ನಿಮ್ಮ ಈ ಕನಸು ನನಸಾದ್ರೆ ಹೇಗಿರುತ್ತೆ ಅಂತ, ಹುಟ್ಟೊ ಮಗು mummy daDDY annabEku ಆಗ! ರೈತ ox, go go. ಅನ್ನಬೇಕು.. ಗಾಯ ಆದಾಗ mummy , oh gOD ಅಂತ ಚೀರಬೇಕು.. ಇದು ಸಾಧ್ಯಾನೆ ನಮ್ಮಂತ ದೇಶದಲ್ಲಿ? ನಮ್ಮಲ್ಲಿ ಇರೋ ವೈವಿಧ್ಯತೆ english ನಲ್ಲಿ ಬರುತ್ಯೆ? ಚಿಕ್ಕಪ್ಪ ಅನ್ನಕ್ಕೆ uncle.. ದೊಡ್ಡಪ್ಪ ಅನ್ನಕ್ಕು uncle.. ,, ನಮ್ಮ ಸೋದರಮಾವನು ಒಂದು ರೀತಿ uncle.. ಪಕ್ಕದ ಮನೆ ಕಮಲಮ್ಮನ ಗಂಡನೂ uncle.. ;) ಏನೂ ವ್ಯತ್ಯಾಸನೆ ಇಲ್ಲ ಅಲ್ಲವೆ.. , ಬಹಳ ಹಿಂದೆ ನನ್ನ ಸ್ನೇಹಿತ ಒಂದು ಪ್ರಶ್ನೆ ಕೇಳಿದಾನೆ., ಇವತ್ತಿಗೂ ನನಗೆ ಉತ್ತರ ಕೊಡಕ್ಕೆ ಆಗಿಲ್ಲ.. ನೀವಾದ್ರೂ ಚೂರು ಸಹಯ ಮಾಡಿ.. ಪ್ರಶ್ನೆ ಬಹಳ ಸುಲಭ "ರಾಜೀವ್ ಗಾಂಧಿ ಇಂದಿರ ಗಾಂಧಿಯ ಎಷ್ಟನೇ ಮಗ" ಇದನ್ನ english ಗೆ translate ಮಾಡು ಅಂದ.. ಸ್ವಲ್ಪ help ಮಾಡಿ please..

OK, ನಾವೆಲ್ಲಾ ಒಂದೇ ದೇಶದವರು , yes.. ಆದ್ರೆ ಈಗಿನ ಭಾರತ ಎಷ್ಟು ಹಳೆಯದು? ೬೦ ವರ್ಷ.. ಆದ್ರೆ ನಮ್ಮ ಭಾಷೆ? ಖಂಡಿತ ಅದ್ದಕಿಂತ ಹಳೆದು ಅಲ್ಲವ? ಹಾಗಿದ್ದ ಮೇಲೆ ಭಾಷೆಯಿಂದ ಅಸ್ತಿತ್ವ ತೋರಿಸಿದ್ದರೆ ತಪ್ಪೇನು? ಯಾವ ಭಾಷೆಗಳು ಇನ್ನೊಂದು ಭಾಷೇನ ದ್ವೇಷಿಸಿ ಅಂತ ಹೇಳಲ್ಲ.. ಆದ್ರೆ ಭಾಷಿಕನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ.. ಅಪಾಯದ ಸ್ಥಿತಿ ಎದುರಾದಗ they will retaliate. ಇದು ಮನುಜ ಸ್ವಭಾವ ಗುಣ,, ನಾನು. ನನ್ನ ಮನೆ, ನನ್ನ ಬೀದಿ.. ಊರು, ರಾಜ್ಯ. ಆಮೇಲೆ ದೇಶ.. ಇದು ಎಲ್ಲರೂ ಪಾಲಿಸುವ ನಿಯಮ.. ಇದು ಪ್ರಪಂಚದ ಎಲ್ಲ ಕಡೆ ಸಹಜ..

ಇನ್ನು ನಾವು ನಮ್ಮ ಭಾಷಿಕರ ಪರವಾಗಿದ್ದಲ್ಲಿ ತಪ್ಪೇನು? ನಾನು ನಮ್ಮ company ಯಲ್ಲಿ ಪರ ಭಾಷಿಕರಿಗೆ ಕನ್ನಡ ತರಗತಿ ನಡೆಸುತ್ತೇನೆ.. ನಿಮ್ಮ ದೃಷ್ಟಿಲಿ ಇದು ತಪ್ಪು ಅಲ್ಲವೆ? ಇಲ್ಲಿ ಇದ್ದ ಮೇಲೆ..ಅವರಿಗೆ ಕನ್ನಡ ಕಲಿಸಿದರೆ ತಪ್ಪೇನು? ಇದರಿಂದ ಭಾಷೆ ಬೆಳೆಯುವುದಿಲ್ಲವೆ? ಹಾಗೂ ಪರಭಾಷಿಕರಿಗೆ ಇಲ್ಲಿನ ವ್ಯವಹಾರಕ್ಕೆ ಅನುಕೂಲ ಆಗುವುದಿಲ್ಲವೆ? yes,, be a roman when you are in rome.. .. ಇದರಲ್ಲಿ ತಪ್ಪೇನು? ಇನ್ನು ನಾನು ಓದಿದ ಕನ್ನಡ ಶಾಲೆಗೆ ನಾನು ಪ್ರತಿ ವರ್ಷ ಸಹಾಯ ಮಾಡ್ತಿನಿ.,, ಅಲ್ಲಿ ಈಗ ಒಂದು computer school ತೆಗಿತ ಇದಿವಿ ನಾನು ಹಾಗು ನನ್ನ ಸ್ನೆಹಿತ.. ನಿಮ್ಮ ಪ್ರಕಾರ ಅದು ತಪ್ಪು ಅಲ್ಲವೆ? ಯಾಕೆ ಅಂದ್ರೆ ಅದು ಕನ್ನಡ ಶಾಲೆ.. engish school ಗೆ ಸಹಾಯ ಮಾಡಿ.. ನಮ್ಮ ಭಾಷೆ ಸಂಸ್ಕೃತಿನ ನಾವು ಹಾಳು ಮಾಡಬೇಕೆ?

ನೀವು ಹೋಲಿಸಿರುವ ದೇಶಗಳು ಎಷ್ಟು ಹಳೆಯದು? ಅದನ್ನ ನಮ್ಮ ದೇಶಕ್ಕೆ ಹೋಲಿಸಕ್ಕೆ ಅಗುತ್ಯೆ? ಆಗಲ್ಲ.. ನಮ್ಮದು ವಿವಿಧತೆಯಲ್ಲಿ ಏಕತೆ ಕಾಣುವ ದೇಶ, ಅದೇ ನಮ್ಮ ವೈಶಿಷ್ಟ್ ಇದನ್ನ ಬಿಟ್ಟು ಬಿಡಿ ಅಂದ್ರೆ ಹೇಗೆ? ವ್ಯಕ್ತಿಗೆ ಧರ್ಮ ಎಷ್ತು ಮುಖ್ಯವೋ ಹಾಗೆ ಭಾಷೆ ಕೂಡ.. ನಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆನ ಒಪ್ಪಿಕೊಳ್ಳೋಣ ಅಂದ್ರೆ ಹೇಗೆ ಸ್ವಾಮಿ? ಬೇರೆ ಯಾರಿಗೋ ತಾಯಿ ಸ್ಥಾನ ಕೊಡಕ್ಕೆ ಹೇಗೆ ಸಾಧ್ಯ? ಜಾಗತೀಕರಣ ಒಪ್ಪಿಕೊಂಡು ದೇಶವಾಗಿ ಹೇಗೆ ಇರಲು ಸಾಧ್ಯ? ಹಾಗದಲ್ಲಿ ಮತ್ತೊಮ್ಮೆ ಗುಲಾಮಗಿರಿಗೆ ಹೋಗಬೇಕಾದೀತು..

ಧನ್ಯವಾದ.

Anonymous ಅಂತಾರೆ...

ಲೋ ತಲೆಗೆಟ್ಟ ಬಾಸಿ..

ಸುಮ್ಕಿರು.. ಇವೆಲ್ಲ "ಟೊಳ್ಳು ರಾಷ್ಟ್ರೀಯತೆ"ಗೆ ಸಂಬಂದ ಇಲ್ಲ.

ನಿಂಗೆ ಮಾಡಕ್ಕೆ ಬೇರೆ ಕೇಮಿಲ್ವೇನೋ?

ಗುರುಗಳೇ!! ಇವಂ ಏನೇನೋ ಬರೀತಾನ್ರಿ. ಸಂಬಂದ ಇಲ್ಲದೇ ಇರೋದು.!!

Anonymous ಅಂತಾರೆ...

ree bhasi,

Swayamsevakaru maadikonda sanghatane andri sneha sindu? andre rashtramattada yochane maado sanghataneya swayamsekaru bere naadinalli maadikondirodu avara maatrubhaasheya janaranella ooggudiso sangatane. bahaLa chennagide swamy. Be a roman when you are in rome simple rule gottillada swayamsevakaru. avaru haage maadiddakke north eastern states nalli bangladesh, china yuvakaranna eLitairodu. Avaru allina bhaashegaLanna upyogisade alli hindi upyogisakke hogi allina janara virodha kattikondaru.


Gowda

Anonymous ಅಂತಾರೆ...

BhaasigaLe, neevu bejaaru maadikollabeDi.ee talekettajanagalu yenaadru helikollali. RSS ondu uttama sanghatane..aadare karnatakada mattadalli kannadavanne baLasi Ashte..

Anonymous ಅಂತಾರೆ...

bhasi swamigalige swalpa samadhana madkolli, Australia govt muttalatana maadide, obba niraparadiyanna hidiyo moolaka. ade Hindu obbanna hididu aa tara chitra himse kottidre neeve ondu PETITION maadi namge sign madralla antha idri.
nimma lekkadalli kannadiga andre HINDU maatra alvaraa ?

yaake chaddigalige ENGLISH kandre ashtu hotte uri ?. namage HINDI,ENGLISH yeradu onde , yeradu illiya bashe illa. haage nodidre English namma karnatakke begane bandittu.

yenu beda 25 varushadinda iddiralla, yaake KHAKI chaddi haktirra heli.

-Mallik

Anonymous ಅಂತಾರೆ...

ರೋಹಿತ್‌ ಅವರಿಗೆ,
ಆರೆಸ್ಸೆಸ್‌ ಕೇವಲ ರಾಷ್ಟ್ರ ಮಟ್ಟದ್ದು, ರಾಜ್ಯ ಮಟ್ಟದ್ದು ಅನ್ನೋದು ತಪ್ಪು. ನಾನೂ ಸಂಘದೋನೇ. ನೀವು ಹೇಳಿದ ಹಾಗೆ ರಾಜ್ಯ ಮಟ್ಟದಲ್ಲಿ ಯೋಚನೆ ಮಾಡದಿದ್ರೆ ರಾಷ್ಟ್ರ ಮಟ್ಟ ಇನ್ನೆಲ್ಲಿಂಬ ಬರಬೇಕು. ಹಾಗಾಗಿ ಸಂಘದಲ್ಲಿ ಎಲ್ಲ ವ್ಯವಹಾರ ಕನ್ನಡದಲ್ಲಿ ನಡೆಯುತ್ತೆ. ಭಾಷಣಗಳೂ ಕೂಡಾ. ಎಷ್ಟು ಶುದ್ಧ ಭಾಷೆ ಇರುತ್ತೆ ಅಂದ್ರೆ ಕೆಲವು ಕನ್ನಡಿಗರಿಗೆ ಅದು ಅರ್ಥ ಆಗೊಲ್ಲ. ಇರ್‍ಲಿ ಬಿಡಿ. ಆರೆಸ್ಸೆಸ್ಸು ಕೂಡಾ ವೈವಿಧ್ಯತೆಯನ್ನು ಉಳಿಸಿಕೊಳ್ಳಬೇಕು ಅಂತಾನೇ ಹೇಳೋದು. ಇಡೀ ದೇಶದಲ್ಲಿ ಎಲ್ಲ ಒಂದೇ ಥರ ಇರಬೇಕು ಅಂತಾನೇ ಇಲ್ಲ. ಅದು ನಮ್ಮ ಸಂಸ್‌ಕೃತಿನೇ ಅಲ್ಲ, ಅಲ್ವೇ. ಏಕಂ ಸತ್‌ ವಿಪ್ರಾಃ ಬಹುಧಾ ವದಂತಿ ಅನ್ನೋರು ನಾವು. ಆರೆಸ್ಸೆಸ್ಸೂ ಅದ್ನೇ ಹೇಳೋದು. ಅಂಘದ ಆಜ್ಞೆಗಳು ಹಿಂದಿಯಲ್ಲಿ ಇಲ್ಲಾ. ಅವೆಲ್ಲ ಸಂಸ್ಕೃತದಲ್ಲಿ ಇರೋದು. ಎಲ್ಲಿಂದ ಎಲ್ಲಿಗೆ ಹೋದರೂ ಅರ್ಥವಾಗಬೇಕು ಅನ್ನೋ ಉದ್ದೇಶ ಅಷ್ಟೇ. ರಾಷ್ಟ್ರ ಮಟ್ಟದ ತರಬೇತಿ ಶಿಬಿರಗಳು ನಡೆದಾಗ ಬೇರೆ ಬೇರೆ ಭಾಷೆಗಳ ಆಜ್ಞೆ ಇದ್ದರೆ ಕಞ್ಟ ಅಲ್ಲವೇ. ಈಗ ನಮ್ಮ ಮಿಲಿಟರಿಯಲ್ಲೂ ಹಾಗೇ ಇಲ್ವಾ. ಅದೇ ಥರ, ಅಷ್ಟೇ. ಮಿಲಿಟರಿಯ ಥರದ ಕೆಲವು ಚಟುವಟಿಕೆಗಳು ಸಂಘದಲ್ಲೂ ಇರೋದ್ರಿಂದ ಇದು ಬೇಕು ಅಅಷಟೇ. ಇನ್ನು ತೆಲುಗರ 'ಸ್ನೇಹಸೇತು' ಕೂಡಾ ಹಾಗೇ. ಅದು ಆ ಭಾಷಿಗರ ಗುಂಪು. ಯಾವುದೇ ಹೆಸರಲ್ಲಿ ಒಟ್ಟಾದರೇನು, ಎಲ್ಲರ ಉದ್ದೇಶ ಒಂದೇ. ನಮ್ಮ ಸಮಾಜಕ್ಕೆ, ದೇಶಕ್ಕೆ ಒಳ್ಳೆದು ಮಾಡಬೇಕು. ಅಷ್ಟೇ. ಯಾರನ್ನೂ ದವ್‌ಏಷ ಮಾಡ್ಬೇಕು ಅನ್ನೋದು ಸಂಘದ ಉದ್ದೇಶ ಅಲ್ಲ. ಉದಾಹರಣೆಗೆ ನಾನು ಮುಂಬೈನಲ್ಲಿ ಇದ್ದರೆ, ಶಾಖೆಗೆ ಹೋದರೂ, ಕನ್ಕಡದವರು ಯಾರಾದರೂ ಇದ್ದಾರಾ ಅಂತಾನೇ ಹುಡುಕುತ್ತಿದ್ದೆ. ಈ ಭಾಷೆ ಸಂಸ್ಕೃತಿ ಎಲ್ಲಾ ತುಂಬಾ ಒಂದಕ್ಕೊಂದು ಅನ್ಯೋನ್ಯ ಸಂಬಂಧ ಇರೋದು. ಅಲ್ವೇ? ಹಾಗೇ ತೆಲುಗರೆಲ್ಲ ಒಟ್ಟಾಗಿ ಎನೋ ಒಂದು ಸಾಮಾಜಿಕ ಚಟುವಟಿಕೆ ಮಾಡಲಿ ಅಂತ ಆ ಸ್ನೇಹ ಸೇತು ಇದೆ. ಅವರೇನು ಕನ್ನಡವನ್ನು ದ್ವೇಷಿಸಿ ಅಂತ ಹೇಳೋದು ಇಲ್ಲ. ಅವರ ಕೆಲವೊಂದು ಕಾರ್ಯಕ್ರಮಗಳಿಗೆ ನಾನೂ ಹೋಗಿದ್ದೆ. ಚೆನ್ನಾಗಿರುತ್ತೆ, ಒಳ್ಳೆ ಪ್ರಯತ್ನ. ನಾವೂ ಬೇರೆ ಕಡೆ ಕನ್ನಡ ಸಂಘ ಮಾಡಿದ ಹಾಗೇ ಅಷ್ಟೇ. ನಾವು ಹೇಗೆ ಎಲ್ಲೇ ಹೋದರೂ ಎಲ್ಲಾ ಕನ್ನಡಿಗರೂ ಒಟ್ಟಿಗೇ ಇರಬೇಕು, ಕನ್ನಡದಲ್ಲೇ ಮಾತನಾಡಬೇಕು ಅಂತ ಬಯಸ್ತೀವೋ ಅವರೂ ಕೂಡಾ. ಇರಲಿ ಬಿಡಿ.

ಇನ್ನು, ಸಂಘದಲ್ಲಿ ಒಂದು ವಿಷಯದ ಬಗ್ಗೆ ಆಗ್ಹ ಇದೆ. ಯಾರೇ, ಎಲ್ಲೇ ಹೋಗಲಿ, ಅಲ್ಲಿನ ಭಾಷೆ ಕಲೀಬೇಕು, ಅದರಲ್ಲೆ ಮಾತನಾಡಬೇಕು ಅಂತ. ಅಂದರೆ, ನಾವು ಎಲ್ಲಿಗೆ ಹೋಗುತ್ತೇವೋ, ಅಲ್ಲಿಯವರ ಜೊತೆ ಬೆರೆತು ಒಂದಾಗಿ ಇರಬೇಕು ಅಂತ. ಅದು ಯಾವ ಭಾಷೆಯವರಿಗೂ ಒಳ್ಳೆದಲ್ಲವೇ. ನಮ್ಮ ಸ್ನೇಹಿತ ಗಣಪತಿ, ಪ್ರವಾತ್‌ಚಂದ್ರ ಅಂತ ಇದ್ದಾರೆ. ನನ್ನ ಜೊತೆ ಸಂಘದಲ್ಲಿ ಕೆಲಸ ಮಾಡೋರು. ‌ಇಬ್ಬರೂ ಕೂಡಾ ಕನ್ನಡ ಚೆನ್ನಾಗಿ ಕಲಿತಿದ್ದಾರೆ. ನಮಗೆ ಅವರು ಬೇರೆಯವರು ಅಂತ ಅನ್ನಿಸೋದೇ ಇಲ್ಲ. ಒಬ್ಬರು ಒರಿಸ್ಸಾದೋರು, ಇನ್ನೊಬ್ರು ತಮಿಳಿನವರು. ಅವರೇನು ಕಲೀಬೇಕು ಅಂತಾ ಇರಲಿಲ್ಲ. ಯಾಕೆಂದರೆ, ಅವರ ಕೆಲಸ ಎಲ್ಲಾ ಇಂಗ್ಲಿಷ್‌ ಬರೋರ ಮಧ್ಯೇನೇ ಇರೋದು. ಆದರೂ ಕಲಿತಿದ್ದಾರೆ. ಇದೆಲ್ಲಾ ಕೆಲವೊಂದು ಉದಾಹರಣೆ ಅಷ್ಟೇ.

Anonymous ಅಂತಾರೆ...

bhaaratadantaha raashtrakke RSS nantaha hindu sanghatnegala avashyakate bahaLa ide..RSS navaru kannadavannu baLasi praanteeya mattadalli janapriyategaLisabeku..

Anonymous ಅಂತಾರೆ...

bhasi, you are awsome..RSS is the root cause of our independence in India..In India if any Indian culture is left, if any hindu culture is still alive, it is because of RSS, Shivsena & BJP.

Anonymous ಅಂತಾರೆ...

Please do not tell something which is not true. RSS is not only the force behind freedom. It has started in 1925, by which time there were many great leaders, who gave good momentum to the freedom fight. you may be an RSS member, but do not be fanatic. You can say that there is a role of RSS in getting freedom from britishers. But, do not tell non-sense. FYI, even I am a swayamsevak from past 20 years and have sangh responsibility. You can quote Balagangadhara tilak, subhash, gandhi or anyone and say that thier role is of high significance. agreeable.

Anonymous ಅಂತಾರೆ...

ಕನ್ನಡದಲ್ಲಿ ಬರೆದೋರಿಗೆಲ್ಲ ಶರಣು!!

ಇವನ್ಯಾವೋನು ಇಂಗ್ಲೀಸಲ್ಲಿ ಬರೆಯೋನು? "awsome" ಅಂತೆ.

ಲೋ ಬೇರೆಯವರೆಲ್ಲ ಕಸ್ಟಪಟ್ಟಿಕೊಂಡು ಕನ್ನಡದಲ್ಲಿ ಬರೆದಿಲ್ವಾ! ನಿಂಗೇನೋ ರೋಗ ಕನ್ನಡದಲ್ಲಿ ಬರೆಯಕ್ಕೆ.

RSS ಬೆಂಬಲ ಮಾಡೋ ಇವನು ಇಂಗ್ಲೀಶಲ್ಲಿ ಬರೇತಾನೆ!! ಇದಪ್ಪ ತಮಾಸೆ!

ನಿಮ್ಮ RSS ಅನ್ನೋ ಏನೇ ಇರಲಿ.. ಅದು ಎಲ್ಲಿ ವರೆಗೆ ಕನ್ನಡಕ್ಕೆ ಮರ್ಯಾದೆ ಕೊಡಲ್ಲ. ಬರೀ ಹಿಂದಿ, ಸಂಸ್ಕೃತ, ಹಿಂದು ಅಂತ ಸಾಯತ್ತೆ ಅಲ್ಲಿವರೆಗೆ ಹಲವು ಕನ್ನಡಿಗರು ಅದಕ್ಕೆ ಸೊಪ್ಪು ಹಾಕಲ್ಲ. ಅಷ್ಟೇ, ನೀವ್ ಏನ್ ಬೋಗಳ್ಕೋತೀರೋ ಬೊಗಳ್ಕೊಳ್ಳಿ.

prajnavanta ಕನ್ನಡಿಗ, ನಿಂಗೆ ಪ್ರಜ್ಞೆ ಐತಾ?

ಯಾಕೆ ಅದು ಬೇಕು ಅಂತ ಹೇಳಣ್ಣ.!! ಬೇಕು ಬೇಕು. ತಮಿಳಿರಿಗೆ ಯಾಕೆ ಬೇಡ ನಿಮ್ಮ RSS? ಏನು ತಮ್ಮ ಬಾಸೆ ಮೇಲೆ ಪಾರ್ಟಿ ಕಟ್ಟಿಕೊಂಡು ತಮಿಳರು ಚನ್ನಾಗಿಲ್ವಾ?

ಏನ್ ಇವರ RSS, BJP ಇವೆರೆಡೇ ಇರೋದು ನಮ್ಮನ್ನ ಉದ್ದಾರ ಮಾಡಕ್ಕೆ!! ಸಾಕು ಮೊದಲು ಉತ್ತರ ಪ್ರದೇಸ, ಮಹಾರಾಷ್ಟ್ರಗಳನ್ನ ಉದ್ದಾರ ಮಾಡಿ. ಅಲ್ಲಿ ಒಳ್ಳೆ ಹುಳಗಳಂತೆ ಮಂದಿ ಸಾಯ್ತವ್ರೆ!

ನಾವು ಇರೋದೇ ಹಿಂಗೆ!
ಗುರು...
ಇದೊಂದು ಬರೀ RSS ಬಗ್ಗೆ ಜಗಳ ಆಯ್ತು.!! ನೀನ್ ಹೇಳದ್ದು ಇವರ ತಲೆಗಿಳಿದಿಲ್ಲ ಅಂತ ಕಾಣ್ತದೆ.!!

Anonymous ಅಂತಾರೆ...

Lo,ನಾವು ಇರೋದೇ ಹಿಂಗೆ, ನಿಂಗೇನು? said...
ninage ketta bhaashey bareyodonde gottu ashte..modaLu maryade kododanna kali..Ninna bhaashe nodidre gottagutte ninu yaava charandi yinda eddu bandavanu anta..

Anonymous ಅಂತಾರೆ...

navu iRode hIge enu aMthare.. "

svalpa bereyorige maryade koDodhu kalthko. ninu kannadiga agidre modalu innobba kannadiganige gaurava koDodhu kali, i charche li Bagavahisidorigella gottagide.. summane bogaLta iro naayi yaru antha.. yake ninna nIne nayi antha karkota idiya?

Anonymous ಅಂತಾರೆ...

ಲೋ ವಿಟ್ಟಲ...

ನಾನೇನು ಕೆಟ್ಟ ಬಾಸೆ ಬರೆದಿದ್ದೀನಿ ತೋರ್ಸೋ?

ಸುಮ್ನೆ ಏನೇನೋ ಬೊಗಳ್ಬೇಡ!! ವಿಸಯದ ಬಗ್ಗೆ ಮಾತಾಡು. ಇಲ್ಲ ಮುಚ್ಚಕೊಂಡಿರು.!

ಏನು ಚರಂಡಿ ಗಿರಂಡಿ ಅನ್ನೋದು.!! ಏನ್ ನೀನು!!

ಹಿಂಗೆ ಒಬ್ಬರನ್ನ 'ಕೀಳು' ಅನ್ನೋದು ನಿನ್ನ ದೊಡ್ಡಸ್ತಿಕೆಯೇನೋ?
ಮೊದಲು ನೀನು ಮರ್ಯಾದೆ ಕಲಿತು ಮಾತಾಡೋ!

Anonymous ಅಂತಾರೆ...

RSS ಕಡೆಯವರ ಹೊಸ ವರಸೆ.

ಏನು ಇಲ್ಲ ಅಂದ್ರೆ, ನಿನ್ನ ಬಾಸೆಯೇ ಕೀಳು, ನೀನೇ ಚರಂಡಿ ಅಂತ ತೆಗೆಯೋದು.

ಇವರ ಈ 'ಕೀಳು' ಅನ್ನೋದು ಹೊಸತಾ? :)
ನಮ್ಮಂತೋರನ್ನ 'ನಾಯಿ' ಅಂತ ಅನ್ನೋದು ಇದೇನು ಹೊಸತ? ನೀವು ಅಲ್ಲಿ ಮರಾಟಿ RSS, ಉತ್ತರ ಪ್ರದೇಸದ BJP ಕಾಲುಗಳನ್ನು ನಾಯಿ ಹಂಗೆ ನೆಕ್ಕಿ, ಎಂಜಲು ತಿನ್ತಾಇಲ್ವಾ? :)

ಹೀಗೆ ಇನ್ನಬ್ಬರ ಬಾಸೆಯನ್ನು 'ಚರಂಡಿ' ಅನ್ನೋರಿಗೆ ಮರ್ಯಾದೇ ಬೇರೆ ಕೇಡು.!!

ಒಂದು ಮಣ ಸಂಸ್ಕೃತ ಹಾಕಿ "ಭಾಗವಹಿಸು, ಚರ್ಚೆ, ಗೌರವ" ಅಂತ ಬೊಗಳಿದ್ರೆ ಅದು ಸಭ್ಯಸ್ತಿಕೆ :).!!

ಇದೇ ಆಗೋಯ್ತು ನಿಮ್ದು.!! :)

ನೀವು ಕೇಳಿ ಮರ್ಯಾದೆ ಇಸಕೋಬೇಕು ಹೊರತು, ನಾವು ಕೊಡಲ್ಲ!! ಹೋಗ್ರೋ! :)


ವಿಸಯದ ಬಗ್ಗೆ ಹೇಳಿ, ಇಲ್ಲ ಕಳಚ್ಕೊಳ್ಳಿ!

Anonymous ಅಂತಾರೆ...

mallik

nimma hesaru nOdidre gottagutte nIvu yake australia police na baitha iddira antha.
avaru enu thindidare antha gottgali biDi, aadre kashmira dalli hindu gaLanna hatye madidoru/ madta iroru yaru? namma karnATakada IISc li nuggiddoru yaru? yarO hELida haage iraq na saddam hussain na nepadalli shivaji nagaradali rakta harisidOru yaru?

Anonymous ಅಂತಾರೆ...

vittal,
summane yAke kai nOyiskotira, I reeti naayigaLa bagge type maaDi? sarvajna heLillave "mUrkharodaNe hOrATa GhOrkhalla mELe maLe huydaMte sarvajna" amtha.. I vyakti innobbara bagge baita iddane horatu constructive aagi , i lekhanada bagge enadru barediddana? ashte alla, BhAsi avara chiNivAranige bareda patra na artha mADikollakku aagilla, ishtu saalade ivana vyaktitva aLeyakke?

Anonymous ಅಂತಾರೆ...

ನಾನು ಚರಂಡಿ, ಮಲ್ಲಿಕಣ್ಣ terrorist.

ಇವರೊಬ್ರೇ ಸಾಭ್ಯಸ್ತರು! ಇನ್ನು ಸರಿ ಹೋತು.

ಕಾಶ್ಮೀರದ ಹಿಂದುಗಳನ್ನು ಕೊಂದು ಪಾಕಿಸ್ತಾನದೋರು, ನಮ್ಮ ಕರ್ನಾಟಕದ ಸಾಬ್ರಲ್ಲ.

ಇನ್ನು ಹಾನೀಪ್ ಬಿಡುಗಡೆ ಆತಲ್ಲ.!! ಮತ್ಯಾಕೆ ಅವನ್ ಸುದ್ದಿ.

ವಿನಿವಿಂಕ್ ಶಾಸ್ತ್ರಿ - ಹಿಂದು ಅಲ್ವಾ?
ನಾಥುರಾಮ್ ಗೋಡ್ಸೆ - ಹಿಂದು ಅಲ್ವಾ?
ವೀರಪ್ಪನ್ - ಹಿಂದು ಅಲ್ವಾ?
MES ಮಂದಿ - ಹಿಂದುಗಳ ಅಲ್ವಾ?
ಕೊಂಕಣೀ ಏಕೀಕರಣ ಮಂಚ್ - ಹಿಂದುಗಳು ಅಲ್ವಾ?
ಶಿವಸೇನೆ, NCP - ಹಿಂದುಗಳು ಅಲ್ವಾ?( ಇವರು ತಾನೆ ಸುಪ್ರೀಂ ಕೋರ್ಟಲ್ಲಿ ಬೆಳಗಾವಿಗೆ ದಾವೆ ಹಾಕಿರೋದು )

ಅಲ್ಲ ಇಲ್ಲೀ ಹಿಂದು, ಸಾಬಿ ಇವೆಲ್ಲ ಯಾಕೆ?

ಮಾತು ತಿರುಗಿಸಿ, ತಿರುಗಿಸಿ, ಎಲ್ಲಿಂದೆಲ್ಲೋ ಒಯ್ದು, ಒಬ್ಬನ್ನ ಚರಂಡಿ, ನಿಮ್ಮ terrorist, ಮತ್ತೊಬ್ಬ ಅಸಭ್ಯ ಹಿಂಗೆ "ಹಣೆಪಟ್ಟಿ" ಕಟ್ಟೋದೇ ಇವರ ಕೆಲಸವಾ?

ಗುರು, ಏನಪ್ಪ ಇದು?

Anonymous ಅಂತಾರೆ...

"I vyakti innobbara bagge baita iddane horatu constructive aagi , i lekhanada bagge enadru barediddana?"

ನೀನೇನು ಬರೆದಿದ್ದೀಯೋ? ಬರೀ ನಾಯಿ ಅಂತ ಬೈತಾ ಇದ್ದೀಯ ಉರ್ಕೊಂಡು?! :)

constructive ಅಂತೆ :).. ಏನು ನೀನು constructive ಕಿಸ್ದಿರೋದು.

ಕೈ ನೋಯ್ಯುತ್ತೆ ಅಂದ್ರೆ ಯಾಕೆ ಬರೇತಿಯಾ? "ನಾಯಿ" ಅಂತ ಬೈಯೋದು ನಿಮ್ಮ ಮನೆಯ ಸಂಪ್ರದಾಯವಾ? ನಿಮ್ಮಪ್ಪ ಅಮ್ಮ ಹಿಂಗೆ ಮಾತಾಡೋದೇನೋ?

Anonymous ಅಂತಾರೆ...

ಕೆಲಸವಿಲ್ಲವಾ?

ಸುಮ್ಮನೆ ಒಬ್ಬನನ್ನು "ನಾಯಿ", "ಚರಂಡಿ" ಅಂತ ಎಲ್ಲ ಕರೆದು, ಹಾಗೆ "ಮಲ್ಲಿಕ್" ಅವರ ಹೆಸರು ಬಗ್ಗೆ personal attackಗೆ ಮಾಡುವುದು ಸರಿಯಲ್ಲ.

ಈ ಲೇಖನದ ಉದ್ದೇಶವೇ ಬೇರೇ, ಸಾರವೇ ಬೇರೆ. ಸುಮ್ಮನೆ ನಿಂದನೆಯನ್ನು ಶುರುಮಾಡಿದ್ದು ತಪ್ಪ. ಯಾರು ಹೇಗೆ ಬರೆದರೇನು, ಅವರ ಮಾತಲ್ಲಿ ಏನಿದೆ ಅನ್ನುವುದನ್ನು ನೋಡಬೇಕು. ಅದು ಬಿಟ್ಟು ನಿನ್ನ ಭಾಷಾಶೈಲಿ ಚನ್ನಾಗಿಲ್ಲ. ಅಂತ ಚೊರೆ ಮಾಡುವುದು ಹೇಯ!

ಸುಮ್ಮನೆ ಬೇಡಾವಾದ ಜಗಳ!

Anonymous ಅಂತಾರೆ...

ಭಾಷಿ ಅವರೆ,

ಇಲ್ಲಿನ ಮುಖ್ಯ ಲೇಖನಕ್ಕಿಂತ ನೀವು ಚಿನಿವಾರರಿಗೆ ಬರೆದ ಪತ್ರ ಉತ್ತಮವಾಗಿದೆ.

ಇಂತಹ ಅಂತರ್ಜಾಲ ತಾಣಗಳಲ್ಲಿ ಪ್ರತಿಕ್ರಿಯೆ ಬರೆಯುವವರಿಗೆ ಕೆಲವು ಅನಾಮಧೇಯರಿಂದ ಅಪಮಾನಕರ ಮಾತುಗಳು ಬರುವುದು ಸಹಜ. ಅದಕ್ಕಾಗಿ ನೊಂದುಕೊಳ್ಳಬೇಡಿ. ನಿಮ್ಮ ಕನ್ನಡದ ಕೆಲಸ ಮುಂದುವರೆಸಿ.

-ಸೋಮಶೇಖರ್

Anonymous ಅಂತಾರೆ...

ಭಾಷಿ ಅವರೆ,

ಇಲ್ಲಿನ ಮುಖ್ಯ ಲೇಖನದ ನೀವು ಚಿನಿವಾರರಿಗೆ ಬರೆದ ಪತ್ರ ಟೊಳ್ಳು ಟೊಳ್ಳು ಗಬ್ಬುಗಬ್ಬಾಗಿದೆ. ಚಿನಿವಾರರಗಿಂತ ಟೊಳ್ಳುತನದಲ್ಲಿ ನೀವು ನಿಮ್ಮ ಸಂಗ ಒಂದು ಕೈ ಮೇಲೆ.

ಇಂತಹ ಅಂತರ್ಜಾಲ ತಾಣಗಳಲ್ಲಿ ಪ್ರತಿಕ್ರಿಯೆ ಬರೆಯುವವರು ಕೆಲವು ತುಸು ಯೋಚನೆ ಮಾಡಿ ಬರೆಯಬೇಕು. ಬರೀ ದೊಡ್ಡ ದೊಡ್ಡ ಸಂಸ್ಕೃತ ಪದಗಳನ್ನು ಬಳಸಿಬಿಟ್ಟರೇ ಟೊಳ್ಳು ಬರಹ ಗಟ್ಟಿ ಎನಿಸುವುದಿಲ್ಲ. ಅದಕ್ಕಾಗಿ, ನಿಮ್ಮ ಕನ್ನಡದ ಕೆಲಸ ಮುಂದುವರೆಸುವ ಕನ್ನಡ ಕಲಿಯಿರಿ, ಸಂಸ್ಕೃತವನ್ನಲ್ಲ. .

-ಸೋಮಶೇಖರ್2!

Anonymous ಅಂತಾರೆ...

ಏನ್ಗುರು...
ಈ “ನಾವು ಇರೋದೇ ಹಿಂಗೆ, ನಿಂಗೇನು” ಅನ್ನೋ ಮನ್ಸ ನಮ್ಮ್ ಕನ್ನಡದ ಇರೋದ ಪಕ್ಸದೋನು. ಈಯಪ್ಪ ಕೆಟ್ಮಾತುಗಳ್ನ ಬರ್ದು ಸುಮ್ನೆ ಈ ಬ್ಲಾಗ್ ನ ಗಬ್ಬೆಬ್ಬಿಸ್ತಾ ಇದಾನೆ. ಇಂತವ್ರಿಂದ್ಲೇ ಕನ್ನಡಿಗರು ಅಂದ್ರೆ ಆಟೋ ಡ್ರೈವರ್ಸ್ ಅನ್ನೋ ಮಾತು ಬಂದಿರೋದು. ನಂಗೇನೋ ಇವ್ನು ಆ ಬ್ಯಾಂಗ್ಲೂರು ಟಾರ್ಪೆಡೋ ಇರ್ಬೇಕು ಅಂತ ಅನುಮಾನ. ಇಲ್ಲಿಗ್ ಬಂದು ನಮ್ ನಮ್ ಮಧ್ಯ ಜಗಳ ತರ್ತಿದ್ದಾನೆ. ಸ್ವಲ್ಪ ಉಸಾರಾಗಿರು ಗುರು! ಇಲ್ದಿದ್ರೆ ನಿಂಗೆ ಇಂತೋರು ಕೆಟ್ಟೆಸ್ರು ತರ್ತಾರೆ.

Anonymous ಅಂತಾರೆ...

ನಾನೊಬ್ಬನೇ ಸರಿ, ನಮ್ಮ RSS ಒಂದೇ ಸರಿ. ನಮ್ಮ ಮಾತೊಂದೇ ಸರಿ. ಇದಕ್ಕೆ ಏನಾರ ಮಾತಾಡಿದರೆ, ಅವರೆಲ್ಲ "ಚರಂಡಿ, ನಾಯಿ, terrorist"ಗಳು.

ನನಗೆ ಎದುರು ಮಾತಾಡಿದರೆ, ನಾನು ನನ್ನ ಚೇಲಾಗಳು ವದರುತ್ತಾನೆ ಇರುತ್ತೇವೆ. ನಾವು ಅಂದ್ರೇನು!! ಹಾ!!

ನಾನು ನನ್ನ ಪಟ್ಟ ಶಿಷ್ಯರು ಹೇಳ್ತೀವಿ. ಇವನು ಕನ್ನಡಿಗ, ಇವನಲ್ಲ ಅಂತ certificate ಕೊಡ್ತೀವಿ. ಇವನ ಭಾಷೆ ಚನ್ನಾಗಿಲ್ಲ, ಇವನು ಶ್ರೇಷ್ಠ ಅಂತ ಹೇಳುವ ಹಕ್ಕು ಇರುವುದು ಸಂಸ್ಕೃತ ತುಂಬಿ ಮಾತಾಡುವ ನಮಗೆ ಮಾತ್ರ ಇರುವುದು.

ನಮ್ಮ RSSನಲ್ಲಿ ಹಿಂದಿ ಮಾತಾಡಿ, ನಾವು ಕನ್ನಡ ಸೇವೆ ಮಾಡುವುದು.

ಸುಮ್ಮನೆ ಇದ್ದರೆ ಸರಿ, ಇಲ್ಲಾ ಅಂದರೆ ಹೀಗೆ ಸಂಬಂಧ ಇಲ್ಲದೇ ಇರುವಂತೆ ಬರೆಯುತ್ತಾನೇ ಇರುತ್ತೇವೆ!!

Anonymous ಅಂತಾರೆ...

good bye. god bless you.

Anonymous ಅಂತಾರೆ...

ರಾಷ್ಟ್ರೀಯತೆ ಮತ್ತು ಏಕತೆಯ ನೆಪದಲ್ಲಿ ಕನ್ನಡ ಹಾಗೂ ಕರ್ನಾಟಕದ ಹಿತಾಸಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ, ಈಗಾಗಲೇ ಕರ್ನಾಟಕ ಈ ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಷ್ಟ ಅನುಭವಿಸಿದೆ. ಇತರೆ ರಾಜ್ಯಗಳಿಗೆ ಇಲ್ಲದ ರಾಷ್ಟೀಯತೆಯ ಕಾಳಜಿ ನಮಗೂ ಬೇಡ.

ನೆಹರುರವರ ತಿಕ್ಕಲು ಪ್ರಚಾರ ಪ್ರಿಯ ನಿಲುವುಗಳಿಂದಾಗಿ ಹಾಗೂ ರಾಜ್ಯದ ವಿಶಾಲ ಮನೋಭಾವದಿಂದಾಗಿ ಸಾವಿರಾರು ಎಕರೆಗಳ ಸಮೃದ್ಧ ಕಾಡನ್ನು ಬಲಿಕೊಟ್ಟು ಟಿಬೇಟಿಯನ್ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಯಿತು (ಕುಶಾಲನಗರ ಮತ್ತು ಮುಂಡಗೋಡ) ಮತ್ತು ಅದೇ ರೀತಿಯಾಗಿ ಬಾಂಗ್ಲಾ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ (ಸಿಂಧನೂರು ಬಳಿ), ನಮ್ಮ ಅಕ್ಕ ಪಕ್ಕದ ರಾಜ್ಯಗಳಲ್ಲಿ ಈ ರೀತಿಯಾಗಿ ಆಶ್ರಯ ಕೊಟ್ಟ ಉದಾಹರಣೆಗಳು ಇಲ್ಲ.

Unknown ಅಂತಾರೆ...

ಎಲ್ಲರಿಗೂ ಶರಣು,

ಏನೋ ಜನ ಸ್ವಲ್ಪ ವಿಚಾರಯುಕ್ತವಾಗಿ ವಿವೇಚನೆಯಿಂದ ಚರ್ಚೆ ನಡೆಸ್ತಿದಾರೆ ಅಂತ ಅನ್ನಿಸ್ತ ಇತ್ತು ಇಶ್ಟು ದಿನ. ಆದರೆ ಇವತ್ತು ನೋಡಿದ್ರೆ ನಾಯಿ ನರಿಗಳ ತರ ಕೆಟ್ಟ ಕೆಟ್ಟದಾಗಿ ವ್ಯಕ್ತಿಗತವಾಗಿ ಆಪಾದನೆ ಮಾಡೋದು ಸರಿಯಲ್ಲ.

ಹೌದು ಆರ.ಎಸ.ಎಸ. ಕೂಡ ಇನ್ನು ಹೆಚ್ಚಿನ ಕನ್ನಡ ಧೋರಣೆಯನ್ನು ಬೆಳೆಸಿಕೊಳ್ಲಬೇಕು. ಹಾಗಂತ ಒಂದು ಸಂಘಟನೆಯನ್ನು ಬಹಳ ಕೆಟ್ಟದಾಗಿ ಖಂಡಿಸುವುದು ಟೀಕಿಸುವವರ ವಿವೇಚನೆಯನ್ನು ತೋರಿಸುತ್ತದೆ. ಈವತ್ತು ನಾವು ಭಾರತೀಯ ಸೇನೆ, ನೌಕಾದಳ, ವಾಯುಸೇನೆ ಯಾವುದನ್ನೂ ಒಪ್ಪಿಕೊಳ್ಳಬಾರದು, ಇದಕ್ಕು ನಮಗೂ ಸಂಬಂಧ ಇಲ್ಲ ಎನ್ನ ಬೇಕು. ಏಕೆಂದರೆ ಇಲ್ಲಿ ಕನ್ನಡದ ಸೊಲ್ಲೂ ಕೇಳಿ ಬರುವ ಹಾಗಿಲ್ಲ. ಸಂಪೂರ್ಣ ಹಿಂದಿ ಮಯ.

ಅರ.ಎಸ.ಎಸ್ಸನ್ನ ಖಂಡಿಸುವುದರಿಂದ ನೀವು ಕನ್ನಡ ಉದ್ಧರ ಮಾಡಲ್ಲ, ಅಥವಾ ಬೆಳೆಸೋದಿಲ್ಲ. ಇಡಿ ಚರ್ಚೆ ನಮ್ಮ ರಾಶ್ತ್ರೀಯತೆಯನ್ನು ಉಳಿಸುತ್ತ ಕನ್ನಡವನ್ನು ಮೇಲೆತ್ತುವ್ದು ಹೇಗೆ ಅಂತ ಇರಬೇಕು. ಆಲೂರರು ಹೇಳಿದ ಹಾಗೆ "ಕಱ್ನಾಟಕಂತರ್ಯಾಮಿ ಭಾರತ ಮಾತೆ"ಯ ಸೇವೆ ಮಾಡಬೇಕು. ನಮ್ಮ ಉತ್ತರ ಭಾರತಿಯರು ಹೇಗೆ ರಾಶ್ತ್ರೀಯತೆಯೆಂದರೆ ಹಿಂದಿ ಅಂಥ ಭಾವನೆ ಇಟ್ಟು ಕೊಡಿದ್ದಾರೋ ಹಾಗೆ ಬಹಳಷ್ಟು ಜನ ಇದ್ದಾರೆ. ಭಾಶೆಗು, ಸಮ್ಶೃತಿಗೂ ಬಹಲ ನಿಕಟವಾದ ಸಂಬಂಧವಿದೆ. ಭಾರತದ ಭಾಷೆ, ಸಂಸ್ಕೃತಿ ಎಲ್ಲದರಲ್ಲು ವಿವಿಧತೆ ಇದೆ. ಅದನ್ನ ನಮ್ಮ ರಾಷ್ಟ್ರೀಅವಾದಿಗಳು ಅರಿತುಕೊಳ್ಳಬೇಕು ಅಶ್ಟೆ. ನ್ಮ್ಮ ಸಱ್ಕಾರ, ಸೇನೆ, ವಿವಿಧ ಱಜಕೀಯ ಪಕ್ಶಗಳು ಹಾಗೂ ಎಲ್ಲ ಉದ್ದಿಮೆಗಲೂ, ಸಂಘಟನೆಗಳು ಇವೆಲ್ಲವುಗಳೂ ಇದನ್ನು ಅರಿತು ಕೊಂಡರೆ ಒಳ್ಳೆಯದು.

ಪೋಲಿ ಕಿಟ್ಟ್ಯ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails